ಹರಪನಹಳ್ಳಿ ಭೀಮವ್ವ
ಕಲ್ಲು ನಾಯೇನೋ ಕೈವಲ್ಯದಾಯಕನೆ
ಕಲ್ಲು ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ ।।ಪ॥
ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆ
ನಡೆಯಬಲ್ಲೆನೊ ದುರ್ಮಾರ್ಗದಿಂದ
ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ
ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ ।।೧।।
ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ
ಮೋಹ ಬಲ್ಲೆನೊ ಬಾಂಧವ ಭವದಿ
ಭೇದಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನ
ಪದದಿ ಭಕುತಿ ಪರಮಾದರೊಂದರಿಯೆನೊ ।।೨।।
ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ
ಕಷ್ಟಾದಾರಿದ್ರ್ಯ ಒಲ್ಲೆನ್ನ ಬಲ್ಲೆ
ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ
ಕೃಷ್ಣ ನಿನದಯ ಬೇದಡಿಕೊಂಬೋದೊಂದರಿಯೆನೊ ।।೩।।
***
Kallu nayeno kaivalyadayakane
Kallu karunadimd~hennagiraluddhara kelo ||pa||
Udaballe unaballe uttama sanga bidaballe
Nadeyaballeno durmargadinda
Kadukopadinda kathina matanadalu balle
Kadalasayananna nama nudiyalondariyeno ||1||
Kamakrodhava balle matsara mada loba
Moha balleno bandhava Bavadi
Bedabuddhiya balle adimuruti ninna
Padadi Bakuti paramadarondariyeno ||2||
Nishthuraduta janara nindisuvudu balle
Kashtadaridrya ollenna balle
Dushta alparige bay tereyaballe bimesa
Krushna ninadaya bedadikombodondariyeno ||3||
***