ರಘುವರ್ಯತೀರ್ಥರ ಸ್ಮರಣೆ
ಪೂರ್ವಾಶ್ರಮದ ನಾಮ ರಾಮಚಂದ್ರಶಾಸ್ತ್ರಿಎಂದೆನುತ
ಪ್ರಚಾರ ಕಾಲದಲ್ಲಿ ಬಹಳ ಆಸಕ್ತಿಯ ಪೊಂದುತ್ತ||ಪಲ್ಲ||
ಸಂಚಾರಮಾರ್ಗದಿ ಮುಂದೆ ಮಣಪುರ ಗ್ರಾಮಸೇರಿ
ಮ್ಲೇಚ್ಛ ರಾಜನಿರಲು ಮತ್ತೆ ಮುಂದೆ ಸಾಗಿ||೧||
ಮೂಲರಾಮನ ಪೆಟ್ಟಿಗೆ ಭುಜದ ಮೇಲೆ ಇರಿಸಿ
ನದಿಯ ದಾಟುತಿರಲು ಭೀಮರತಿಯು ದಾರಿಯ ಬಿಡಲು||೨||
ಸ್ವರ್ಣಾವಳಿ ಗ್ರಾಮದಲ್ಲಿ ಸುಬ್ಬಾಭಟ್ಟ ದಂಪತಿಗಳಿಗೆ
ಮಗುವು ಆಗುವ ಸೂಚನೆ ತಿಳಿಸಿ ಮಠಕ್ಕೆ ಕೊಡಬೇಕಂತ
ಹೇಳಿ||೩||
ಪ್ರಸವದ ಸಮಯದಲ್ಲಿ ಬಂಗಾರು ತಟ್ಟೆಯ ಕಳಿಸಿ
ಕುಶಲದಿ ಮಗುವನೆ ತರಿಸಿ ಕೂರ್ಮಾಭಿಷೇಕದ ಹಾಲು ಕುಡಿಸಿ||೪||
ನಾಮಕರಣ ಮಾಡಿ ರಾಮಚಂದ್ರನೆಂದುಯುಕ್ತ
ವಯಸುಬರಲು ಉಪನಯನ ಕಾರ್ಯ ಮಾಡಿ||೫||
ಸರ್ವಮೂಲ ಗ್ರಂಥಗಳ ಪಾಠ ಪ್ರವಚನ ಮಾಡಿ
ತುರೀಯಾಶ್ರಮವಿತ್ತು"ರಘೋತ್ತಮತೀರ್ಥ" ರೆಂದು ಕರೆದು||೬||
ಪಿಂಗಳನಾಮ ಸಂವತ್ಸರ ದ ಜ್ಯೇಷ್ಟ ಬಹುಳ ತದಿಗಿ
ಮಧ್ವೇಶಕೃಷ್ಣನ ಪಾದ ಸೇರಿದರು ಬಹು ತ್ವರದಿ||೭||
*********