Showing posts with label ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈ prasannavenkata. Show all posts
Showing posts with label ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈ prasannavenkata. Show all posts

Tuesday, 19 November 2019

ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈ ankita prasannavenkata

by ಪ್ರಸನ್ನವೆಂಕಟದಾಸರು
ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈಹರಿಯೆಂದವರಿಗೆಲ್ಲಿದುರಿತದಂದುಗವು ಪ.

ಹರಿಯೆಂದಜಾಮಿಳಗೆ ನರಕ ತಪ್ಪಿತಾಗಲೆಹರಿಯೆಂದ ಕರಿಗೆ ಕೈವಲ್ಯಾಯಿತುಹರಿಯೆಂದ ತರಳಗೆಉರಗಹಾರಾದವುಹರಿಯೆಂದವಅಕ್ಷಯಸಿರಿಪಡೆದ1

ಹರಿಸೇವೆಯನೆ ಮಾಡಿ ವಿರಿಂಚಪದವನುಂಡಹರಿಸೇವೆಯಲಿ ನಿಶಾಚರರಸಾದಹರಿಸೇವೆಯಲಿ ಹರಿವರರ್ಮುಕ್ತರಾದರುಹರಿಸೇವೆಯಲಿ ಮತ್ರ್ಯರು ಸುರರಾದರು 2

ಹರಿಪಾದ ಸೋಕಲು ಸ್ಥಿರ ಪಾತಾಳದ ಪಟ್ಟಹರಿಪದ ಸೋಕಿದಅರೆಪೆಣ್ಣಾಗೆಹರಿಪಾದ ಸೋಕಿ ಕಾಳುರಗ ಪಾವನನಾದಹರಿಪಾದ ಸೋಕುವಾತುರವಿಡಿದು ಹರಿಯೆನ್ನಿ 3

ಮಂಡೂಕಹಿ ಮುಖದಿ ಕಂಡ ಮಕ್ಷಕವ ತಾನುಂಡೇನೆಂಬುವಪರಿಮೃತ್ಯುವಿನಕುಂಡದಿ ವಿಷಯದಹಿಂಡುವಿಚಾರ್ಯಾಕೆಪುಂಡರೀಕಾಕ್ಷಾಂಘ್ರಿ ಕೊಂಡಾಡಿ ಮನದಿ 4

ಯುವತಿ ಮಕ್ಕಳು ಮಂದಿರವನಗಲಿಸುವರುಜವನ ಬಂಟರು ಈ ಕಾಯವ ನೆಚ್ಚದೆಅವಿರಳ ಪ್ರಸನ್ವೆಂಕಟವರದ ರಂಗನಸವಿ ನಾಮಾಮೃತದಾಸ್ವಾದವನುಂಬ ದೃಢದಿ 5
*******