Showing posts with label ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು gopalarya. Show all posts
Showing posts with label ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು gopalarya. Show all posts

Thursday, 5 August 2021

ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ankita gopalarya

by gopalaryaru


ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪ

ದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1

ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದe್ಞÁನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2

ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3

ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4

ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5

***