..
ಮುರಲೀಧರ ಮೋಹನಾಂಗ ಕಾಯೋ ಕೃಪಾಂಗ ದೇವನರಸಿಂಹ ಹೇ ಭವ ಭಂಗ ಪ.
ಥಳ ಥಳಿಸುತ ಗೆಳತಿಯರು ಸಹಿತಾಗಿಚಳತೆಂಬೊ ದಿವ್ಯ ಆಭರಣಚಳತೆಂಬೊ ದಿವ್ಯಾಭರಣ ಭೂಷಿತರಾಗಿಕುಳಿತ ನಾರಿಯರು ಕಡೆಯಿಲ್ಲ1
ಕುಂತಲ ಕದುಪಿನ ಕಾಂತೆಯರು ಹರುಷದಿಕಂತುನಯ್ಯನ ಮುಖನೋಡಿಕಂತುನಯ್ಯನ ಮುಖನೋಡಿಮೈಮರೆದು ನಿಂತ ನಾರಿಯರು ಕಡೆಯಿಲ್ಲ 2
ಅಂದುಗಿ ಅರಳೆಲೆ ಬಿಂದಲಿ ಭಾಪುರಿಅಂದವಾಗಿದ್ದ ಅಸಲಿಅಂದವಾಗಿದ್ದ ಅಸಲಿ ಕಟ್ಟಿದಕಂದರಿನ್ನೆಷ್ಟು ಕಡೆಯಿಲ್ಲ3
ಕಾಲಲಂದುಗೆ ಗೆಜ್ಜೆ ತೋಳಲಿ ತಾಯತಲಾವಳಿಗೆ ಮುತ್ತು ಅಲುಗುತಲಾವಳಿಗೆ ಮುತ್ತು ಅಲುಗುತಸುಳಿದಾಡೊ ಬಾಲರಿನ್ನೆಷ್ಟು ಕಡೆಯಿಲ್ಲ 4
ಹಸಿರು ಪಚ್ಚದ ಕಂಭ ಕುಸುರಾದ ಗಿಳಿಬೋದುಗೆಎಸಕೊ ಮಾಣಿಕದ ಜಗುಲಿಯ ಎಸಕೊ ಮಾಣಿಕದ ಜಗುಲಿ ಸಿಂಹಾಸನದಿ ವಸುದೇವ ತನಯ ಕುಳಿತಾನೆ 5
ಬಿಸÀಜನೇತ್ರಿಯರ ಮುಂದೆ ಕುಶಲದ ಮಾತ್ಹೇಳುತವಸುದೇವ ತಾನು ಕುಳಿತಾನವಸುದೇವ ತಾನು ಕುಳಿತಾನ ದೇವಕಿಯಸೊಸೆಯರ ಕಂಡು ಹರುಷಾಗಿ 6
ಚಲುವ ರಾಮೇಶನ ಬಲದ ಭಾಗದಿಬಂದು ಹಲವು ಮಾತುಗಳು ಕಿವಿಯೊಳುಹಲವು ಮಾತುಗಳು ಕಿವಿಯೊಳುಹೇಳುತ ಬಲರಾಮ ತಾನೆ ಕುಳಿತಾನೆ7
****