Showing posts with label ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ vijaya vittala. Show all posts
Showing posts with label ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ vijaya vittala. Show all posts

Thursday, 17 October 2019

ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ankita vijaya vittala

ವಿಜಯದಾಸ
ಬಲ್ಲವಾಗಿಲ್ಲೆ ಪರಮಾತ್ಮಾ
ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ಪ

ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು
ಆಡಿÀದವೆಲ್ಲ ಹರಿಯ ರೂಪವೆಂದು
ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು
ಕೂಡಿದದ್ದೆಲ್ಲ ಹರಿ ಭಕ್ತರೆಂದು 1

ತಾಪತ್ರಯಗಳೆಲ್ಲ ಮಹಾ ತಪಸು ಎಂದು
ರೂಪಗಳೆÀಲ್ಲ ಹರಿಕಾಂತಿ ಎಂದು
ವ್ಯಾಪಾರ ಹರಿ ಅಧೀನವೆಂದು 2

ತಾರತಮ್ಯಕಿದು ಪರಲೋಕದಿ ಸರಿಯಿಲ್ಲ
ಸಿರಿ ಹರಿಯದೊರೆ ತನಗೆ ಎಂದೆನುತಾ
ನಿತ್ಯ ಕಾಲಕಾಲಕೆ
ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ 3

ಒಲಿಸಿ ಒಲಿಸಿ ಒಲಿದು ಒಲಿದು
ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ
ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು ೪
************