Showing posts with label ಆರು ಹಿತವರು ಎಂದು ನಂಬಬೇಡ neleyadikeshava. Show all posts
Showing posts with label ಆರು ಹಿತವರು ಎಂದು ನಂಬಬೇಡ neleyadikeshava. Show all posts

Tuesday, 15 October 2019

ಆರು ಹಿತವರು ಎಂದು ನಂಬಬೇಡ ankita neleyadikeshava

ಆರು ಹಿತವರು ಎಂದು ನಂಬಬೇಡ                      ।।ಪ।।
ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ               ।।ಅ.ಪ।।

ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿಯೇ ರಕ್ಷಿಪಳೆಂತೆಂಬೆನೆ ಅ ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ            ।।೧।

ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ
ವಿಗಡ ಬಂಧನದಿಂದ ಬಂಧಿಸಿದನು
ಜಗವರಿಯೇ ಸೋದರನು ಮಮತೆಯುಳ್ಳವನೆನಲು
ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ    ।।೨।।

ತನಗೆ ದೇಹಾನುಬಂಧುಗಳೇ ಬಂಧುಗಳೆಂದು
ಮನದಿ ನಿಶ್ಚಯವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದಿ ಕೇಶವ
ಅನುದಿನ ನಂಬಿದವಗಿಹಪರದಿ ಸುಖವು                   ।।೩।।
***

Aru hitavaru endu nambabeda ||pa||
Yarigyarilla Apattu bandodagidade ||a.pa||

Janaka hitadavanendu nambabahude himde
Tanaya prahladanige pita munidanu
Jananiye rakshipalemtembene a kunti
Tanaya radheyanige eradenisida mele ||1|

Maganu tettiganenalu kamsa tannaya pitana
Vigada bamdhanadinda bandhisidanu
Jagavariye sodaranu mamateyullavanenalu
Hagevarasi valiyanu anuja kolisida mele ||2||

Tanage dehanubandhugale bandhugalendu
Manadi niscayavagi nambabeda
Ganakrupanidhi kagineleyadi kesava
Anudina nambidavagihaparadi sukavu ||3||
***