Showing posts with label ಎಂಥಾದೋ ಶ್ರೀ ವೈಕುಂಠವೆಂಥಾದೋ ಕಂತುಪಿತನ jagannatha vittala ENTHAADO SRI VAIKUNTAVENTHAADO KANTUPITANA. Show all posts
Showing posts with label ಎಂಥಾದೋ ಶ್ರೀ ವೈಕುಂಠವೆಂಥಾದೋ ಕಂತುಪಿತನ jagannatha vittala ENTHAADO SRI VAIKUNTAVENTHAADO KANTUPITANA. Show all posts

Saturday, 9 October 2021

ಎಂಥಾದೋ ಶ್ರೀ ವೈಕುಂಠವೆಂಥಾದೋ ಕಂತುಪಿತನ ankita jagannatha vittala ENTHAADO SRI VAIKUNTAVENTHAADO KANTUPITANA



ಎಂಥಾದೋ ಶ್ರೀ ವೈಕುಂಠವೆಂಥಾದೋ ಪ

ಕಂತುಪಿತನ ದೇಹಕಿರಣ ಅದ
ರಂತರಂಗ ಹೇಮಾಭರಣ ಕಾಂತಿ
ಗಂತು ನಾಚಿದ ರವಿ ಅರುಣ ಅಹಾ
ನಂತ ಕಾಲದಲ್ಲಿ ಸಂತತ ತುತಿಪರ್ಗೆ
ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1

ಪಾಲಸಾಗರ ಮಧ್ಯೆ ಕೂಟ ಒಳ
ಗೇಳು ಸುತ್ತಿಸಾಗರ ದಾಟಿ ತಾಳ
ಮೇಳದವರು ಮೂರುಕೋಟಿ ನಾಮ
ಪೇಳ್ವ ಗಾಯಕರ ಗಲಾಟೆ ಆಹ
ಶೀಲ ಮುನಿಗಳು ದೇವ ಗಂಧರ್ವರು
ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2

ಹೇಮ ಪ್ರಾಕಾರದ ಪುರವು ಅಲ್ಲಿ
ಆ ಮಹ ಬೀದಿ ಶೃಂಗಾರವು ನೋಡೆ
ಕಾಮಧೇನು ಕಲ್ಪತರುವು ಬಲು
ರಮಣೀಯವಾದ ಇರವು ಆಹಾ
ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ
ಆ ಮಹಮುಕ್ತರು ಸೇರಿಹ ಮಂದಿರ 3

ಸುತ್ತಲು ಸನಕಾದಿ ಮುನಿಯ ದಿವ್ಯ
ನರ್ತನ ಗಾಯನ ಧ್ವನಿಯು ಪುಷ್ಟ
ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ
ಅಷ್ಟಮ ಸ್ತ್ರೀಯರ ಮನೆಯು ಆಹಾ
ಪಾದ ಸಂ
ಪತ್ತಿಗೀ ಶಯನ ಸರ್ವೋತ್ತಮನ ಗೃಹ 4

ಥಳಥಳಿಸುವ ದಿವ್ಯದ್ವಾರ ಅಲ್ಲಿ
ಹೊಳೆವಂಥ ರಂಗಮಂದಿರ ಮುತ್ತಿ
ಭಾರ ಹೇಮ
ತುಳಸಿ ಸರದ ಶೃಂಗಾರ ಆಹಾ
ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ
ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
****