ragamalike
Audio by Mrs. Nandini Sripad
ಶ್ರೀ ಪುರಂದರದಾಸರ ಕೃತಿ
ರಾಗ ಮೋಹನ ಖಂಡಛಾಪುತಾಳ
ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯ ನೋಡಿ ಧನ್ಯನಾದೆನು ಧರೆಯೊಳು || ಪ ||
ಇನ್ನು ಈ ಭವ ಭಯಕೆ ಅಂಜಲೇತಕೆ ದೇವ ಚೆನ್ನ ಶ್ರೀ ವೆಂಕಟೇಶಾ ಈಶಾ || ಅ ಪ. ||
ಏಸು ಜನ್ಮದ ಸುಕೃತ ಫಲವು ಬಂದೊದಗಿತೋ
ಈ ಸ್ವಾಮಿ ಪುಷ್ಕರಣಿಯೊಳ್
ನಾ ಸ್ನಾನವನು ಮಾಡಿ ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ ಲೇಸಿನಿಂದಲಿ ಪೊಗಳುತ
ಆ ಸುವರ್ಣದ ಗರುಡ ಗಂಭವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ || 1 ||
ರಾಗ ಕೇದಾರಗೌಳ
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲು
ದಟ್ಟಣೆಯ ಮಹಾಜನದೊಳು
ಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂ -
ಗೆಟ್ಟು ಹರಿಹರಿಯೆನುತಲಿ
ಗಟ್ಟಿ ಮನಸಿನಲಿ ತಲೆ ಚಿಟ್ಟಿಟ್ಟು ಶೀಘ್ರದಲಿ
ಕಟ್ಟಂಜನಕೆ ಪೋಗುತ
ಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆ ಸುಟ್ಟೆ ಎನ್ನಯ ದುರಿತವಾ-ದೇವಾ || 2 ||
ರಾಗ ಖರಹರಪ್ರಿಯ
ಶಿರದಲ್ಲಿ ರವಿಕೋಟಿತೇಜದಿಂದೆಸೆಯುವ
ಕಿರೀಟ ವರ ಕುಂಡಲಗಳ
ಕೊರಳಲ್ಲಿ ಸರ ವೈಜಯಂತಿ ವನಮಾಲೆಯನು
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳ
ವರನಾಭಿ ಮಾಣಿಕವನು
ನಿರುಪಮ ಮಣಿ ಖಚಿತ ಕಟಿಸೂತ್ರ ಪೀತಾಂಬರವ ಚರಣಯುಗದಂದುಗೆಯನು - ಇನ್ನು || 3 ||
ರಾಗ ಪೂರ್ವಿಕಲ್ಯಾಣಿ
ಇಕ್ಷುಚಾಪನ ಪಿತನೆ ಪಕ್ಷೀಂದ್ರ ವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾಜ್ಜಗನ್ನಾಥನೇ
ರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು
ನಿರಪೇಕ್ಷ ನಿತ್ಯ ತೃಪ್ತನೇ
ಕುಕ್ಷಿಯೊಳಗಿರೇಳು ಭುವನವನು ಪಾಲಿಪನೆ ರಕ್ಷಿಸುವುದೊಳಿತು ದಯದಿ - ಮುದದಿ || 4 ||
ರಾಗ ಮೋಹನ
ಉರಗ ಗಿರಿಯರಸ ನಿನ್ನ ಚರಣ ನೋಡಿದ ಮೇಲೆ
ಉರಗ ಕರಿ ವ್ಯಾಘ್ರ ಸಿಂಹ
ಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದ
ಪರಿಪರಿಯ ಭಯಗಳುಂಟೇ
ಪರಮ ವಿಷಯಗಳ ಲಂಪಟದೊಳಗೆ ಸಿಲುಕಿಸದೆ ಕರುಣಿಸುವುದೊಳಿತು ದಯವಾ
ಸ್ಮರಗಧಿಕ ಲಾವಣ್ಯ ಪುರಂದರವಿಠಲನೇ ಶರಣ ಜನ ಕರುಣಾರ್ಣವಾ ದೇವಾ || 5 ||
***
pallavi
ninna divya mUrutiya kaNNu taNiya nODi dhanyanAdeno dhareyoLu
anupallavi
innu I bhava bhayake anjaletako cenna siri vEnkatEsha shrIsha
caraNam 1
Esu janmada puNya bandodakido shrI svAmi puSkaraNiyoLa
snAna japa tapa mADi varaha dEvara nODi shrI svAmi mahatvArake
shrI sarIravanu IDADi pradakSiNe mADi lEshadim pogaLudali
A suvarnada garuDa kambhavana nODi santOSadim koNDADida bIDade
caraNam 2
nenneraDane dvAravane dANDi pOgudali daTTaNiyu bahu janadali
gaTTi manadali taleya ceTTiDuta neTTane kaTTAnjanake tA barutali
krSNAjinadavara peTTugaLa kANutali kangeTTu hariyenutali
beTTadhipati ninna drSTinda kANutali suTTidenneya duritavu sarvavu
caraNam 3
shiradali ravikOTi tEjadindevantha vara kirITavu kuNDala
koraLoLiha sarige vaijayantiya mAle pari pariya hAragaLanu
uradi shrIvastavanu karadi shanka cakragaLu vara nAbhi mANikavanu
nirupama maNI khacita kaTisUtra pItAmbara caraNadhvayadandugeyanu innu
caraNam 4
ikSu shApana pitana pakSIndara vAhanane lakSmIpati kamalAkSane
akSaya aja surEndrAdi vanditane sAkSAt jagannAthane
rAkSasAntakane nirapEkSa nitya trptane nirupama nissImane
kukSiyoLagirELu lOkavanu tALdavane rakSisuvudendu dayadi mudadi
caraNam 5
uraga giri arasu nimma caraNagaLa kaNDa mElE uraga kari vyAghra simha
arasu cOrAghni vrushcika modalAda pari pariya bahaLa bhayavu
parama viSaya lampaTadoLage nA sikadante karuNisuvu dolidu dayadi
smaragathika lAvaNya tande purandara viTTala sharaNa jana karuNArNava dEva
***
ಪುರಂದರದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪ
ಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2
ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3
ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4
ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
********