ಶ್ರೀ ಏರೀ ಶೇಷಾಚಾರ್ಯ ಕೃತ ಶ್ರೀ ಶ್ರೀನಿವಾಸ ಕಲ್ಯಾಣದ ಒಂದು ಪ್ರಸಂಗದಲ್ಲಿ ಶ್ರೀ ಶ್ರೀನಿವಾಸನು ತನ್ನನ್ನು ತಾನೇ ವರ್ಣಿಸಿಕೊಳ್ಳುವ ಪರಿ...ಬಹು ಸುಂದರವಾಗಿದೆ...
ಸುಪದ || ೬೧ || ತಾಳ: ಅರ್ಧಾದಿ
ಯೇನೆಲೆ ಭಾಮಿನಿ ಬಾಗಿಲು ತೆಗೀಯ | ನಾ ಗಾನಪ್ರಿಯನು ಬಂದೆ ಕೋಮಲೀ | ನಾನು ಗಾನಪ್ರಿಯ
ಯೇನೆಲೆಯನುತೆಂದು ಹೀನ ಮಾತಾಡುವಾ | ನೀನ್ಯಾರೆ ಕತ್ತಲಲ್ಲಿ ಬಂದವಾ ಯಲ ನೀನಾರೈ ಕತ್ತಲಲ್ಲಿ || ೧ ||
ತುಚ್ಛ ಸೋಮಕನಾ ಮಡುಹೀ ಸ್ವಚ್ಛ ವೇದವಾ ತಂದಾ ಮತ್ಯಾವತಾರನೇ ಮಾನಿನಿ ನಾನು । ಮತ್ಯಾವತಾರನೇ ಮತ್ತ್ವ, ನೀನಾದರೆ ಕುತ್ತಿತ ಜಲದೊಳು ಸ್ಟೇಚ್ಛೆಯಿಂದಲಿ ತಿರುಗೋಗ್ಯ ನೀನು ಸ್ಟೇಚ್ಛೆಯಿಂದಲಿ ತಿರುಗೋಗೈ || ೨ ||
ಮಂದರ ಗಿರಿಯನು ಛಂದಾಗಿ ಯತ್ತಿದ ಕುಂದಾರದಾನೆ ಕೂರ್ಮರೂಪಿಯೇ ನಾನು ಕುಂದಾರವಾನೆ ಮಂದಾರ ಯತ್ತಿದವಗೆ ಯಿಂದು ಬಾಡಿಗೆ ಕೊಟ್ಟು ಮುಂದೆ ಕೆಲಸಾ ಪೇಳುವರಾರೆ | ಯಿಲ್ಲಿ ಕೆಲಸಾ ಪೇಳುವರಾರೈ || ೩ ||
ದುರಳಾ ಹಿರಣ್ಯಾನ ಮುರಿದು ಭೂಮಿಯಾ ತಂದ ವರಹಾವತಾರನೇ ವನಜಾಕ್ಷಿ ನಾನು | ವರಹಾವತಾರನೇ ವನಜಾಕ್ಷಿ
ವರಾಹ ನೀನಾದರೆ ತರುಳೇರು ಕಂಡಂಜಾರೂ ಗಿರಿಮುಖಿಗಳ ಕುರಿತೋಗೈ | ಬೇಗ ನೀನು ಗಿರಿಮುಖಿಗಳ ಕುರಿತೋಗ್ಯ || ೪ ||
ಕರಿಯಾ ಕಂಭದೀ ಬಂದು ದುರುಳನೂದರ ಬಗದಾ | ನರಸಿಂಹರೂಪ ಕಣೆ ನಾಯಕಿ | ನಾನು ನರಸಿಂಹರೂಪ ಕಣೆ ||
ನರಸಿಂಹನಾದರೇ ನಾರೇರು ನಕ್ಕಾರು ಕರಿರಾಜಗಳ ಹುಡುಗೋಗೈ | ಕರಿರಾಜಗಳ ಹುಡುಗೋಗೈ || ೫ ||
ಬಲಿಯ ದಾನವ ಬೇಡೀ ಯಳಿಯಾ ಸಾಧಿಸಿಯವನಾ |ತಲಿಯಾ ತುಳಿದ ವಾಮನಾಖ್ಯನೇ ನಾನೂ || ವಾಮನಾಖ್ಯನೇ ಬಲಿಯ ದಾನವ ಬೇಡಿದ ಚೆಲುವ ಬ್ರಹ್ಮಚಾರಿಗೆ ಕೆಲಸಾ ನಾರೇರಲ್ಲೇನದ್ಹೇಳೈ | ನಿನಗೆ ಕೆಲಸಾ ನಾರೇರಲ್ಲೇನದೇ || ೬ ||
ಛಂದಾದಿ ಕ್ಷತ್ರಿಯರ ಕೊಂದು ಶೋಣಿತ ಮಡುಹಾ ಹಿಂದೆ ಮಾಡಿದ ಪರಶುರಾಮನೆ ನಾನು | ಪರಶುರಾಮನೇ ನಾನು ||
ಹಿಂದೆ ನೀ ಕ್ಷತ್ರಿಯರ ಕೊಂದವನಾದರೆ ಮುಂದೆ ಖಳರ ಕೊಲ್ಲಲಿ ಪೋಗೈ | ಮುಂದೆ ಖಳರ ಕೊಲ್ಲಲಿ ಪೋಗ್ಯ ॥ ೭ ||
ಛಂದಾದಿ ರಾವಣನಾ ಕೊಂದು ಸೀತೆಯಾ ಬ್ಯಾಗ ತಂದಂಥಾ ರಾಮನು ಕಾಣೆ ರಮಣೀ | ನಾನು ರಾಮನು ಕಾಣೆ ||ತಂದಾದರೆ ಸೀತೆಯ ಪೋಂದೀಯಯೋಧ್ಯಾವ ಕುಂದಾರದನೇ ರಾಜ್ಯಪಾಲಿಸೈ ಬ್ಯಾಗ ನೀನು ಕುಂದಾರದನೇ ರಾಜ್ಯಪಾಲಿಸೈ || ೮ ||
ಗೋವರ್ಧನವನೆತ್ತಿ ಗೋವು ಗೋಪಾಲಕರಾ। ದೇವ ಕಾಯಿದಾ ಗೋಪಾಲಕೃಷ್ಣನೇ ನಾನು | ದೇವ ಕಾಯಿದಾ ಗೋಪಾಲಕೃಷ್ಣನೇ ॥
ಗೋವುಗಳನ್ನು ಕಾಯ್ವಾ ನೀ ಯಿವ್ಯಾಳಿಯಾಕೆ ಬಂದೀ ತೀವ್ರ ಉದಯದಲ್ಲಿ ಬಾಹೋಗೈ ನಾಳೆ | ತೀವ್ರ ಉದಯದಲ್ಲಿ ಬಾಹೋಗೈ || ೯ ||
ಶುದ್ಧೋದನಿಯಲ್ಲಿ ನಾನಿದ್ದು ಬೋಧಿಸಿದಾವನಾ ಬುದ್ಧಾ ಬಂದಾವ ಕಾಣೆ ಶುದ್ಧಳೆ ನಾನು । ಬುದ್ದಾ ಬಂದಾವ ಕಾಣೆ ಬುದ್ಧ ನೀನಾದರಲ್ಲಿದ್ದವರೆಲ್ಲಾ ಜನರು ಬೌದ್ಧರಿದ್ದಲ್ಲಿ ಪೋಗ್ಯ | ಬೌದ್ಧರಿದ್ದಲ್ಲಿ ನೀ ಪೋಗೈ || ೧೦ ||
ಕುದರೀಯನೇರಿ ಖಡ್ಗ ಮುದದಿ ಧರಿಸಿ ಬಂದಾ ಸುದತಿ ಕಲ್ಕಿಯು ಕಾಣೆ ಶೋಭಾಳೇ | ನಾನು ಸುದತಿ ಕಲ್ಕಿಯು ಕಾಣೆ||
ಕುದುರೆಯೇರಿದ ಕಲ್ಕಿ ಮುದದಲ್ಲಿ ಬರಲ್ಯಾಕೆ ವಧೀಯಾ ಮಾಡೆ ದುಷ್ಟರಾ ಮೋಗಯ್ಯಾ ಬ್ಯಾಗ ॥ ವಧೀಯಾ ಮಾಡೆ ದುಷ್ಟರಾ ಪೋಗೈ || ೧೧ ||
ನಾರೀಯನೆತ್ತಿಕೊಂಡು ನಾರೀ ಬಹಳ್ಹೊತ್ತಾಯಿತು ಧೀರೆ ವಂದಿಪೆ ತೆರೆ ಬಾಗಿಲು ನಿನ್ನಾ | ವಂದಿಪೆ ತೆರೆ ಬಾಗಿಲಾ ||
ನೀರಜಾಕ್ಷನೇ ನಿನ್ನ ನಾರಿಯ ಸಹಿತಾಲೆ ವೀರ ಸುಖದಿ ಬದುಕೋಗೈ | ಬ್ಯಾಗ ವೀರ ಸುಖದಿ ಬದುಕೋಗೈ ॥ ೧೨ ||
ಯೇರೀವೇಂಕಟ ನಿನ್ನ ವಾರಿಜಾಕ್ಷೀ ಮುದ್ದಾಡೆ ನೀರಜೋದ್ಭವಳ ಸಹಿತಾ ಬಂದೆನೇ ಲಕುಮೀ ॥ ನಾನು ನೀರಜೋದ್ಭವಳ ಸಹಿತ ಬಂದೆನೇ ನೀರಜಾಕ್ಷಾ ನೀನಾದರಾನಂದವೆನುತೆಂದು ಭಾರೀ ಬಾಗಿಲು ತೆಗೆದಪ್ಪಿದಾಳು ಹರಿಗೆ | ಭಾರೀ ಬಾಗಿಲು ತೆಗೆದಪ್ಪಿದಾಳು ಹರಿಗೆ || ೧೩ ||
***
yeri sheshacharyaru - jyeshta shukla ashtami