Showing posts with label ಶ್ರೀಮದಶ್ವಗ್ರೀವನೊಲುಮೆಗೆ ಧಾಮರೆನಿಪ HKS phalashruti kamalapati vittala. Show all posts
Showing posts with label ಶ್ರೀಮದಶ್ವಗ್ರೀವನೊಲುಮೆಗೆ ಧಾಮರೆನಿಪ HKS phalashruti kamalapati vittala. Show all posts

Monday, 2 August 2021

ಶ್ರೀಮದಶ್ವಗ್ರೀವನೊಲುಮೆಗೆ ಧಾಮರೆನಿಪ HKS phalashruti ankita kamalapati vittala

 ಹರಿಕಥಾಮೃತಸಾರದ ಫಲಶ್ರುತಿ

ಶ್ರೀ ಮದಶ್ವಗ್ರೀವನೊಲುಮೆಗೆ ಧಾಮರೆನಿಪ ಶ್ರೀ ವಾದಿರಾಜರುಪ್ರೇಮದಲ್ಲಿ ಜಗನ್ನಾಥದಾಸರ ಸ್ವಪ್ನದಲಿ ಬಂದುಶ್ರೀ ಮನೋರಮನರಿಪ ತತ್ವ ಸು ಸೌಮನದ ಮಾಲಿಕೆಯನಿತ್ತು-ದ್ದಾಮ ಗ್ರಂಥವ ರಚಿಸಿರೆನುತಲಿ ನುಡಿದ ಕಾರಣದೀ ಪ


ಭಾರತವು ಭಾಗವತ ವಾಮನ ಗಾರುಡ ಭವಿಷ್ಯೋತ್ತರ ಪುರಾಣಚಾರು ವಿಷ್ಣು ರಹಸ್ಯ ಪಂಚರಾತ್ರಾಗಮ ವಾಯುಸಾರ ಗುರವೃತ್ಪ್ರವೃತ್ತವು ಈರ ಸಂಹಿತಾದಿತ್ಯವಾಗ್ನೇಯಪಾರ ರಸಗಳ ತೋರ್ಪ ಶ್ರೀ ಗುರು ಮಧ್ವ ಶಾಸ್ತ್ರದಲೀ 1

ಭಾರಿ ಭಾಗ್ಯವಲೋಕಿಸಿದರಲಿ ಸಾರ ಕ್ರೋಢೀಕರಿಸಿ ದೀನೋ-ದ್ಧಾರಗೋಸುಗ ಹರಿಕಥಾಮೃತ ಸಾರವನು ರಚಿಸೀಸ್ಥೈರ್ಯ ಮಾನಸದಿಂದ ಭಾವೀ ಭಾರತೀಪತಿ ವಾದಿರಾಜರಭೂರಿ ತೋಷಕೊಪ್ಪಿಸುತಲಾಪಾರ ಮುದ ಪಡೆದೂ 2

ಸಾಸಿರಾರ್ಥಗಳೊಂದು ಪದಕವಕಾಶವಿರುವೋ ಶ್ರೀದ ವಿಷ್ಣುಸಾಸಿರದ ನಾಮವನು ಯೋಚಿಸಿ ಇಹರು ಗ್ರಂಥದಲೀಈಸು ರಹಸ್ಯವನರಿತು ಪಠಪಗೆ ಏಸು ದೂರವೊ ಮುಕ್ತಿಬರಿದಾ-ಯಾಸ ಬಟ್ಟುದರಿಂದ ಫಲವೇನಿಲ್ಲವೀ ಜಗದೀ 3

ಹ ಯೆನಲು ಹರಿಯೊಲಿಯುವನು ತಾ ರಿ ಯೆನಲು ರಿಕ್ತತ್ವ ಹರಿಸುವಕ ಯೆನಲು ಕತ್ತಲೆಯೆಂಬಾe್ಞÁನವನು ಪರಿಹರಿಪಾಥಾ ಯೆನಲು ಸ್ಥಾಪಿಸುವ e್ಞÁನ ಮೃಯೆನಲು ಮೃತಿಜನಿಯ ಬಿಡಿಸುವತ ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯಾ 4

ಸಾ ಯೆನಲು ಸಾಧಿಸುವ ಮುಕ್ತೀ ರ ಯೆನಲು ರತಿಯಿತ್ತು ರಮಿಪನುಕಾಯ ವಾಙ್ಮನದೆಂಟು ಅಕ್ಕರ ನುಡಿದರದರೊಳಗೇಶ್ರೀಯರಸು ವಿಶ್ವಾದಿ ಅಷ್ಟೈಶ್ವರ್ಯ ರೂಪದಿ ನಿಂತು ತಾ ಪರ-ಕೀಯನೆನಿಸದೆ ಇವನ ಮನದೊಳು ರಾಜಿಪನು ಬಿಡದೇ 5

ಹರಿಯೆನಲು ಅನಿರುದ್ಧ ಧರ್ಮವು ದೊರಕಿಸುವ ಪರಮ್ಹರುಷದಲ್ಲಿ ಸ-ತ್ವರ ಕಥಾಯೆನೆ ಕೃತಿರಮಣನರ್ಥಗಳ ಹನಿಗರೆವಾವರ ಅಮೃತಯೆನಲಾಗ ಶ್ರೀ ಸಂಕರುಷಣನು ಕಾಮವನು ಯೋಜಿಪಸರಸ ಸಾರೆನೆ ವಾಸುದೇವನು ಮೋಕ್ಷ ಕೊಡುತಿಪ್ಪಾ 6

ಈ ರಹಸ್ಯವನರಿತು ಪ್ರತಿದಿನ ಸಾರಸಾಕ್ಷನ ಪಾದಕಮಲಕೆಆರು ಪದದಂತಿರುವ ನರರಿಗೆ ಮೇಲೆ ನುಡಿದ ಫಲಾಸಾರಿ ಸಾರಿಗೆ ಒದಗಿ ಬರುತಲೆ ಸೇರಿಸುವರೈ ವಿಷ್ಣು ಮಂದಿರತೋರುವನು ನಿಂದಕರ ನಿಕರಕೆ ನಿರವಯನು ನಿತ್ಯ 7

ಚಾರುತರದೀ ಹರಿಕಥಾಮೃತ ಸಾರಕೃತ ಋಷಿ ಭಾರದ್ವಾಜರುಸಾರ ಹೃದಯದಿ ನಿಂತು ಸಕಲ ಸು ಶಾಸ್ತ್ರದಾಲೋಕಾಸಾರಿ ಸಾರಿಗೆ ಮಾಡಿ ಮಾಡಿಸಿ ಸೂರೆಗೊಟ್ಟಾನಂದ ಚಿನ್ಮಯಪಾರವಾರಾಶಯನ ಶ್ರೀ ಕಮಲಾಪತಿ ವಿಠಲಾ 8

****