Showing posts with label ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ rajesha hayamukha. Show all posts
Showing posts with label ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ rajesha hayamukha. Show all posts

Thursday 5 August 2021

ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ

ಬಂದ ಜನರಿಗಿಷ್ಟವನೀವ ಕ್ಷೇತ್ರ

ವಾದಿರಾಜರು ವಾದದಿಂದ ವಾದಿಸಿ

ವೀರಶೈವರ ಗೆದ್ದ ಕ್ಷೇತ್ರ ಪ


ಒಂದು ಭಾಗದಿ ರೂಪ್ಯಪೀಠ ಮ-

ತ್ತೊಂದು ಭಾಗದಿ ಸೋದಾಕ್ಷೇತ್ರ

ಕುಂದು ಎಳ್ಳಷ್ಟಿಲ್ಲದೆ ತೋರ್ಪು

ದೆಂದು ಹರಿಭಕ್ತರಾದರಿಸುವರು 1


ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ

ವೈಕುಂಠನಂತಾಸನಗಳು

ಒಂದಾಗಿ ಶೋಭಿಸುತಿರುವ

ಚೆಂದವೇನೆಂದು ಪೇಳಲಿ ಮನವೆ 2


ರಾಜೇಶ ಹಯಮುಖ ಚರಣ

ಕಂಜ ಮಧುಪನಂತಿರುವ ಶ್ರೀಭಾವಿ-

ಕಂಜಜಾತನ ಪದಕರುಹ

ವಾದಿರಾಜರಾಯರ ದಿವ್ಯ ಕ್ಷೇತ್ರ 3

***