'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ನಿನ್ನ ನೋಡಿದೆ ಕನ್ಯಕುಮಾರಿ | ನಿನ್ನ ನೋಡಿದೆ
ಎನ್ನ ಪಾಪಗಳ ನೀಡ್ಯಾಡಿದೆ ಪ
ಹಿಮರಾಜಪುತ್ರಿ | ಹೇಮಾಭರಣಗಾತ್ರಿ
ಆ ಮಹಾ ಪವಿತ್ರಿ | ಆನಂದ ನೇತ್ರೆ 1
ಉಡುರಾಜನಂತೆ ತಿಲಕದಾಕಾಂತಿ
ನೋಡುತಾಲಿ ನಿಂತೆ | ಓಡುತಾಲಿ ಬಂದೆ 2
ಕೋಟಿಸೂರ್ಯಕಿಂತ ಮೇಟಿ ಆ ದಂಥ
ಮಾಟವಾದ ಮುಖವ ನೋಡುತ್ತಾ ನಿಂತೆ 3
ತಂದೆ ನಾರಸಿಂಹ ವಿಠಲನ್ನದಯದಿ
ಬಂದೆ ಈ ದಿನದಿ ನಿಂದು ಕರುಣಿಸಿದೆ 4
***