ಪುರಂದರದಾಸರು
ಹಮ್ಮುನಾಡಲಿ ಬೇಡಹಮ್ಮು ಈಡೇರದು ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ ಪ.
ಮುನ್ನೊಮ್ಮೆ ರಾವಣನು ಜನಕನಾ ಸಭೆಯಲ್ಲಿತನ್ನಳವನರಿಯದಲೆ ಧನುವೆತ್ತಲುಉನ್ನತದ ಆ ಧನು ಎದೆಯ ಮೇಲೆ ಬೀಳಲುಬನ್ನಬಟ್ಟುದ ನೀವು ಕೇಳಿಬಲ್ಲಿರಯ್ಯ1
ಕುರುಪತಿಯ ಸಭೆಯಲ್ಲಿ ಕೃಷ್ಣ ತಾ ಬರಲಾಗಿಕರೆದು ಮನ್ನಣೆಯನ್ನು ಮಾಡಿದಿರಲುಧರೆಗೆ ಶ್ರೀ ಕೃಷ್ಣನಂಗುಟವನಂದೊತ್ತಲುಅರಸುಆಸನ ಬಿಟ್ಟು ಉರುಳಾಡಿದ2
ಅತಿ ವೇಗದಲಿ ಕೃಷ್ಣ ಸತ್ಯಭಾಮೆಯ ಕರೆದುಸೀತೆ ನೀನಾಗೆಂದು ನೇಮಿಸಿದನುಮತಿವಂತೆ ಬಗೆಬಗೆಯ ಶೃಂಗಾರವಾದರೂಸೀತಾ ಸ್ವರೂಪ ತಾನಾಗಲಿಲ್ಲ 3
ಹನುಮನನು ಕರೆಯೆಂದು ಖಗಪತಿಯನಟ್ಟಲುಮನದಲಿ ಕಡುಕೋಪದಿಂದ ನೊಂದುವಾನರನೆ ಬಾಯೆಂದು ಗರುಡ ತಾ ಕರೆಯಲುಹನುಮ ಗರುಡನ ತಿರುಹಿ ಬೀಸಾಡಿದ 4
ಇಂತಿಂತು ದೊಡ್ಡವರು ಈ ಪಾಡು ಪಟ್ಟಿರಲುಪಂಥಗಾರಿಕೆ ತರವೆ ನರಮನುಜಗೆ ?ಚಿಂತಾಯತನು ಚೆಲ್ವ ಪುರಂದರವಿಠಲನಸಂತತವು ನೆನೆ ನೆನೆದು ಸುಖಿಯಾಗೊ ಮನುಜ 5
********