RSS song .
ವಂದಿಪೆನು ಈ ಭೂಮಿಗೆ ನಮನ ಭಾರತ ಮಾತೆಗೆ ||ಪ||
ಹರನ ಹೊತ್ತಿಹ ಹಿರಿಯ ಗಿರಿಯಿದು ಹಿಮದ ಹೂವಿನ ಹಂದರ
ಮೂರುಸಾಗರ ಮಿಲನಗೊಂಡಿಹ ಮಹಿಮೆಯಾಂತಿಹ ಮಂದಿರ
ತೊದಲುನುಡಿಗಳ ತಪ್ಪುತಿದ್ದುತ ತತ್ವತೋರಿದ ತಾಯಿಗೆ
ಮಡಿಲ ಮಕ್ಕಳಿಗೆಲ್ಲ ಮಮತೆಯ ಮಧುವನುಣಿಸಿದ ಮಾತೆಗೆ ||೧||
ತರಳರೆಲ್ಲರ ತಮವ ತೊಳೆಯುವ ತೀರ್ಥತೊರೆಗಳ ತಾಣವು
ಉನ್ನತಿಯ ಉತ್ತಂಗಕೇರಿದ ಉತ್ತಮರ ಉದ್ಯಾನವು
ಸಪ್ತಸಾಗರ ಸುತ್ತಿಸುಳಿದಿಹ ಸಂಸ್ಕೃತಿಯ ಸಿರಿಸೌರಭ
ಧರೆಗೆ ದಾರಿಯ ದೀಪದಂತಿಹ ದಿವ್ಯದರ್ಶನ ದುರ್ಲಭ ||೨||
ಶಮನಗೊಳ್ಳಲು ಶೌರ್ಯದಾರ್ಭಟ ಶತ್ರುವನು ಸದೆಬಡಿಯದೆ
ವೀರವೃಂದದ ವೀರಗರ್ಜನೆ ವಿಜಯವನಿತೆಯ ವರಿಸದೆ
ಬಾಹುಬಾಹುಗಳಲ್ಲಿ ಬೆಳೆಸುತ ಭೀಮಭಾರ್ಗವ ಬಲವನು
ಭೇಧಭಾವವ ಬಿಸುಟು ಬೀರುತ ಭುವಿಗೆ ಭಾಗ್ಯದ ಬೆಳಕು ||೩||
ಕಷ್ಟಕೋಟಲೆ ಕೋಟಿ ಇದ್ದರು ಕಾರ್ಯಕ್ಷೇತ್ರದ ಕೋರಿಕೆ
ತೀರಿಸದೆ ತನುತೆರಳದೆಂದಿಗು ತನ್ನತನವನು ತೋರದೆ
ಪ್ರಕಟಗೊಂಡಿದೆ ಪ್ರಗತಿ ಪಥದಲಿ ಪ್ರಥಮತೆಯ ಪ್ರೇರೇಪಣೆ
ಭಗವೆಯಡಿಯಲಿ ಬಾಣುಭುವಿಯನು ಬೆಸೆವ ಬೃಹದಾಯೋಜನೆ||೪||
***
vaMdipenu I BUmige namana BArata mAtege ||pa||
harana hottiha hiriya giriyidu himada hUvina haMdara
mUrusAgara milanagoMDiha mahimeyAMtiha maMdira
todalunuDigaLa tapputidduta tatvatOrida tAyige
maDila makkaLigella mamateya madhuvanuNisida mAtege ||1||
taraLarellara tamava toLeyuva tIrthatoregaLa tANavu
unnatiya uttaMgakErida uttamara udyAnavu
saptasAgara suttisuLidiha saMskRutiya sirisouraBa
dharege dAriya dIpadaMtiha divyadarSana durlaBa ||2||
SamanagoLLalu SouryadArBaTa Satruvanu sadebaDiyade
vIravRuMdada vIragarjane vijayavaniteya varisade
bAhubAhugaLalli beLesuta BImaBArgava balavanu
BEdhaBAvava bisuTu bIruta Buvige BAgyada beLaku ||3||
kaShTakOTale kOTi iddaru kAryakShEtrada kOrike
tIrisade tanuteraLadeMdigu tannatanavanu tOrade
prakaTagoMDide pragati pathadali prathamateya prErEpaNe
BagaveyaDiyali bANuBuviyanu beseva bRuhadAyOjane||4||
***