by Yadugiriyamma
ಕಣ್ಣಾರೆ ನೋಡೆನ್ನ ಕರುಣಾ ಕಟಾಕ್ಷದೀ ಇಂದಿರಾರ
ಮಣಾ ಅರವಿಂದನೇತ್ರದಲಿ ಪ
ಕೌಸಲ್ಯಾದೇವಿಗೆ ಮೋಹಪಡಿಸಿದ ನೇತ್ರ
ದಶರಥನಿಗೆ ದಿವ್ಯಪ್ರಾಣನೇತ್ರಾ
ಶಶಿಮುಖಿ ಸೀತೆಯ ಬಿಡದೆ ನೋಡುವ ನೇತ್ರಾ
ಶಶಿ ರವಿ ಕಾಂತಿಗೆ ಸಮನಾದ ನೇತ್ರದೀ 1
ಕೌಸಲ್ಯಾದೇವಿಗೆ ಮೋಹಪಡಿಸಿದ ನೇತ್ರ
ದಶರಥನಿಗೆ ದಿವ್ಯಪ್ರಾಣನೇತ್ರಾ
ಶಶಿಮುಖಿಯರನೆಲ್ಲಾ ಒಲಿಸಿದ ನೇತ್ರ[ವರ
ಸತಿ] ರುಕ್ಮಿಣಿದೇವಿಯ ಪ್ರಾಣನೇತ್ರಗಳಿಂದ 2
ಪಾರ್ವತೀರಮಣನ ಮೋಹಪಡಿಸಿದ ನೇತ್ರ
ಅಸುರರು ಮೋಹಿಸಿ ಭ್ರಮಿಸಿದ ನೇತ್ರ
[ನಿರುತ ] ಪದ್ಮಿನೀ ರೂಪಿನಲಿ ಮಗ್ನವಾಗಿಹ ನೇತ್ರ
ಶ್ರೀನಿವಾಸನೆ ನಿಮ್ಮ ಕರುಣ ನೇತ್ರಗಳಿಂದಾ 3
*****