ಕಾಖಂಡಕಿ ಶ್ರೀ ಕೃಷ್ಣದಾಸರು
ಚದುರಂಗನಾಡುವ ನೋಡಿರೇ | ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ
ಭೂಮಿಯ ಹಲಗಿಲಿ ಕಾಯದ ಮನೆಯೊಳು | ವ್ಯಾಮೊಹಿ ಜೀವನು ಅರಸನಿಲ್ಲಿ | ನೇಮದಿ ಪುಣ್ಯ ಪಾಪದ ಪಲಗಳಿಸುವ | ಈ ಮನೆವೆಂಬ ಪ್ರಧಾನಿಯನಿಟ್ಟು 1
ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ | ನಾನು ನನ್ನದು ಎಂಬ ಒಂಟೆಗಳ | ಜಾಣತನದ ಬುದ್ದಿ ಚಿತ್ತದ ಕುದುರೆ | ನಿ ಧಾನ ದಶೇಂದ್ರಿಯ ಕಾಲಾಳಿನಿಂದ 2
ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ | ಮೂಲದಿ ಹಾನಿವೃದ್ದಿಗಳಿಹವೋ | ಮೇಲೆ ಯಶಾಪಯಶ ಪಾಲಿಗೆ ತರುವ | ನೃ ಪಾಲಕ ಮಹಿಪತಿನಂದನ ಜೀವನ 3
***