ನಾರಾಯಣತೇ ನಮೋ ನಮೋ
ತಾರಕ ಪದಯುಗ ನಮೋ ನಮೋ ಪ
ಪಾರಾಶರತೇ ನಮೋ ನಮೋ ಗುಣ
ವಾರಿಧಿ ಸುಖಮಯ - ನಮೋ ನಮೋ ಅ.ಪ
ಇಂದಿರೆ ಮನುಕುಮುದೇಂದು ಪರಾವರ
ನಂದಗುಣಾರ್ಣವ ನಮೋ ನಮೋ
ಸಿಂಧುಶಯನ ಅರವಿಂದ ಸುನಾಭ
ಮಹೇಂದ್ರ ವಿನಾಂತನೆ ನಮೋ ನಮೋ1
ಸುಂದರ ವೀ ಜಗ _ ತಂದೆ ಮಹಾಬಲ
ಕುಂದು ವಿದೂರನೆ ನಮೋ ನಮೋ
ಬಂಧ ವಿಮೋಚಕ ಮಂದಜ ಭವಮನ
ಸ್ಪಂದನ ಕರುಣಿಯೆ ನಮೋ ನಮೋ2
ಸುಂದರ ತಮ ಅರವಿಂದ ಸುಲೋಚನ
ಕಂಧರ ಪಾಣಿಯ ನಮೋ ನಮೋ
ನಂದನ ಕಂದ ಮುಕುಂದ ಜನಾರ್ಧನ
ಛಂದಸು ವೇದ್ಯನೆ ನಮೋ ನಮೋ 3
ನಾಶರಹಿತ ಸ್ವತಂತ್ರಗುಣಾತ್ಮಕ
ವಾಸುದೇವತೇ ನಮೋ ನಮೋ
ಭೇಶಕಾಂತಿ ಮುಕ್ತೇಶ ಪರಾಮೃತ
ವಿಶ್ವಜೂತಿ ಬಲ ನಮೋ ನಮೋ 4
ಶೇಷಶಯನ ವಾರಾಸಿಗೇಹ
ಮಾಯೇಶ ಸನಾತನ ನಮೋನಮೋ
ಓಸು ಜಾಡಾಜಡ ರಾಸಿ ಬಿಂಬಗುಣ
ಭಾಸಕ ನಾಯಕ ನಮೋ ನಮೋ 5
ದೇವ ದೇವ ಜಗ ಪಾವನ ಚರಿತ
ವಿಭಾವರಿ ಚರಹರ ನಮೋ ನಮೋ
ಜೀವರ ಜೀವ ವಿಭಾವ ಸುನಾಯಕ
ಭಾವುಕ ಜನಪ್ರಿಯ ನಮೋ ನಮೋ 6
ಅಂಡಜವಾಹನ ಪುಂಡರೀಕನುತ
ಪಾಂಡುರಂಗತೇ ನಮೋ ನಮೋ
ತೊಂಡವತ್ಸಲಾಖಂಡ ವಿಜಯ
ಕೋದಂಡಪಾಣಿ ತೇ ನಮೋ ನಮೋ 7
ವೆಂಕಟೇಶ ಭವ ಸಂಕಟ ನಾಶಕ
ಶಂಕರ ಮಹಿಮನೆ ನಮೋ ನಮೋ
ಸುಂಕ ಸುಲಿವ ಬಿರುದಾಂಕಿತ ಕುಟಿಲಾ
ಟಂಕರಹಿತ ತೇ ನಮೊ ನಮೋ 8
ಶಿಷ್ಠವರದ ಪರಮೇಷ್ಠಿ ಜನಕ
“ಶ್ರೀ ಕೃಷ್ಣವಿಠಲ” ವಿಭು ನಮೋ ನಮೋ
ಅಷ್ಟಕರ್ತ ಶಿಪಿವಿಷ್ಠಸುನಾಮಕ
ಧಿಟ್ಟ ನೃಸಿಂಹನೆ ನಮೋ ನಮೋ 9
****