Showing posts with label ಏನು ಕಾರಣ ಬಂದೆ ಗಂಗೆ ನಾನೇನು ಪುಣ್ಯವನು vijaya vittala. Show all posts
Showing posts with label ಏನು ಕಾರಣ ಬಂದೆ ಗಂಗೆ ನಾನೇನು ಪುಣ್ಯವನು vijaya vittala. Show all posts

Wednesday, 16 October 2019

ಏನು ಕಾರಣ ಬಂದೆ ಗಂಗೆ ನಾನೇನು ಪುಣ್ಯವನು ankita vijaya vittala

ಏನು ಕಾರಣ ಬಂದೆ ಗಂಗೆ |
ನಾನೇನು ಪುಣ್ಯವನು ಮಾಡಿದವನಲ್ಲ ಪ

ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ |
ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ |
ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ |
ದೋಷವರ್ಜಿತ ವಾರಣಾಸಿ ಕಡಿಯದಲೆ |
ಲೇಸಾಗಿ ತಿಳಿಪುವದು ಭೀಷ್ಮನ ಜನನೀ 1

ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ |
ಮಲಜನರ ದೋಷವನು ಕಳೆವೆನೆಂದು ಬಂದ್ಯೋ |
ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ |
ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ |
ನೀರಜ ನಯನೇ 2

ನಿತ್ಯ ಕರ್ಮಗಳು ನೋಡಲಿ ಬಂದ್ಯೋ |
ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ |
ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ |
ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ |
ನಿಜವ ತಿಳುಪುವದು ವಿಜಯವಿಠ್ಠಲಸುತೆ 3
**********