- ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
ವರದಾ ನದೀ ತೀರದಿ
ಶೋಭಿಪ ಕರ್ಜಗಿಯ ವಾಸಾ ।
ಗುರುರಾಜರ ಕರುಣೆಯ
ಕಂದಾ ದಾಸಪ್ಪಾ ಸಲಹೋ ।।
ಗುರು ಕರುಣದಿ ನೀ ಮಾನವಿ
ಮುನಿಪುಂಗವರಿಂದ ।
ಸರ್ವಾಂತರ್ಯಾಮಿ
ಶ್ರೀದವಿಠಲಾಂಕಿತ
ಪಡೆದ ಧೊರೆ ।।
ಆಷಾಢ ಶುದ್ಧ ಏಕಾದಶೀ
ದಿನ । ಉ ।
ಕೃಷ್ಟವಾದ ವೇಂಕಟನಾಥನ
ಪುರಕೆ ಪೊರಟ ಪ್ರಭೋ ।।
****