Audio by Vidwan Sumukh Moudgalya
ಶ್ರೀ ಜಗನ್ನಾಥದಾಸಾರ್ಯ ವಿರಚಿತ
" ಶ್ರೀ ಕೃಷ್ಣದ್ವೈಪಾಯನರ ಸ್ತೋತ್ರ ಪದ "
ರಾಗ : ಶಂಕರಾಭರಣ ಆದಿತಾಳ
ಕೃಷ್ಣದ್ವೈ ಪಾಯನ ಗುರುರಾಯ ಮನೋ
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ॥ಪ॥
ರಾಮಕೃಷ್ಣ ಪವನಾತ್ಮಜಾ ಪಾದ
ತಾಮರಸವ ಧೇನಿಸುವ ಪರಿವ್ರಾಜಾ
ಭೀಮತೀರಗ ಪಿಪ್ಪಲ ಕುಜಾ ಮೂಲ
ಸೀಮೆಯೊಳಗೆ ರಾಜಿಸುವ ಯತಿರಾಜ॥೧॥
ಭೇದ ಮತಾಂಬುಧಿ ಚಂದಿರಾ
ಗುರುವೇದವ್ಯಾಸ ಮುನಿವರ ಸುಕುಮಾರಾ
ಸಾಧು ಸದ್ಗುಣಗಣ ಸಾಗರನಾದ
ಬಾದರಾಯಣನಾ ನಾಮದಲಿಪ್ಪ ಧೀರಾ॥೨॥
ದೇವ ಜಗನ್ನಾಥವಿಠಲನ ಪಾದ
ಸೇವಕ ಬೇಡುವೆ ಹರಿಮೂರ್ತಿ ಧ್ಯಾನಾ
ಕೇವಲ ಭಕುತಿ ನಿರ್ಮಲ ಜ್ಞಾನ ಕೊಟ್ಟು
ಪಾವನ್ನ ಮಾಡಿ ಪಾಲಿಸೋ ಪ್ರತಿದಿನ॥೩॥
****
ಸ್ತೋತ್ರ
ವೇದವ್ಯಾಸಾಂಬುಧೇರ್ಜಾತಃ ವೇದೇಶಜ್ಞಾನಚಂದ್ರಿಕಃ।
ಕೃಷ್ಣದ್ವೈಪಾಯನೇಂದುರ್ಮೇ ಸಂತಾಪಾನ್ ಹಂತು ಸಂತತಮ್॥