..
ಕೋಲ ಕೋಲೆನ್ನಿ ಕೋಲಕೋಲೆನ್ನಿ ಮುತ್ತಿನ ಕೋಲಕಾಲ ಕಾಲಕೆ ಸುಭದ್ರಿಯ ಮಾನ ಕಳೆದುನಾಚಿಸಿ ನಗುತಲೆ ಬನ್ನಿ ಪ.
ದೇವ ನಾರಿಯರೆಲ್ಲ ಬಂದರೆ ಅಲ್ಲಿರುವೊ ಗಂಧರ್ವರು ಬಂದರೆಪಾವನ ಸುರರೆಲ್ಲ ಬಂದರೆ ನಮ್ಮ ದೇವರ ನೋಡಬೇಕೆಂದಲೆ 1
ರಂಭೆ ಊರ್ವಶಿಯರು ಬಂದರೆ ತಾಳ ತಂಬೂರಿ ಜನರೆಲ್ಲ ಬಂದರೆ ತುಂಬರ ನಾರದರು ಬಂದರೆ ನಮ್ಮ ಅಂಬುಜಾಕ್ಷನ ನೋಡೆವೆಂದಾರೆ2
ಸಿದ್ದ ಸಾಧ್ಯರೆಲ್ಲ ಬಂದರೆಪ್ರಸಿದ್ದ ನಾಟಕರೆಲ್ಲ ಬಂದರೆ ಸನ್ನದ್ದರಾಯರೆಲ್ಲ ಬಂದರೆ ನಮ್ಮ ಮುದ್ದುರಮೆ ಅರಸನ್ನ ನೋಡೆವೆÀಂದಾರೆ3
****