ಮಂದಮತಿಯೈ (ಮಂದಮತಿಯು) ನಾನು ಮದನ ಜನಕನು ನೀನು
ಕುಂದುಗಳನೆಣಿಸದಲೆ ದಯೆ ಮಾಡಿ ಸಲಹೋ ಪ
ಪಾಪಕರ್ತನು ನಾನು ಪಾಪನಾಶಕ ನೀನುಕೋಪ ಮದ ಮತ್ಸರದಿ ಸುಳಿವೆ ನಾನು ||ತಾಪವನು ತರೆದು ನಿರ್ಭಯವ ಮಾಡುವೆ ನೀನುರೂಪಛಾಯಕೆ ಮರುಳುಗೊಂಬೆನೈ ನಾನು 1
ಶರಣ ಶಿಕ್ಷಕ ನೀನುಪರಮಪಾತಕಿನಾನುದುರಿತಪರ್ವತವ ಪರಿಹರಿಪೆ ನೀನು ||ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನುಗರುವಮತಿಯೈ ನಾನಗಮ್ಯ ನೀನು 2
ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನು ||ತಂದೆ ಶ್ರೀ ಪುರಂದರವಿಠಲ ರಾಯನೆ ದೇವಎಂದೆಂದು ಭಕ್ತರನು ಸಲಹುವೆಯೋ ನೀನು 3
****

ರಾಗ ಕಾಂಭೋಜ ಝಂಪೆ ತಾಳ
khambhoji - jhampa
pallavi
mandamadiyO nAnu madana janakanu nInu kundugaLaneNisade dayamADi salaho
caraNam 1
pApa kartanu nAnu pApa nAshanu nInu kOpa mada matsaradi suLive nAnu
tApavanu taridu nirbhayava mADuve rUpa chAyake maruLu kombenO nAnu
caraNam 2
sharaNa rakSaka nInu parama pAtaki nAnu durita parvatava pariharipe nInu
maruLu kombenu nAnu aridu rakSipe nInu garuvAhankAri nAnu agamya nInu
caraNam 3
manda bhAgyanu nAnu indirApati nInu hindu mundina suddi ariyadava nAnu
tande shrI purandara viTTalarAyane endendu bhaktaranu salahuveyo nInu
***
P: mandamatiyO nAnu madana janakanu nInu kundugaLaneNisade dayamADi salaho
C1: pApa kartanu nAnu pApa nAshanu nInu kOpa mada matsaradi suLive [kuNive] nAnu
tApavanu taridu nirbhayava mADuve nInu rUpa chAyake maruLu kombenO nAnu
2: sharaNa rakSaka nInu parama pAtaki nAnu durita parvatava pariharipe nInu
maruLu kombenu nAnu aridu rakSipe nInu garuvAhankAri nAnu agamya nInu
3: manda bhAgyanu nAnu indirApati nInu hindu mundina suddi ariyadava nAnu
tande shrI purandara viTTalarAyane endendu bhaktaranu salahuveyo nInu
***
Meaning: P: I am dullwitted, you are the creator of Manmatha (the love God); please look after me without counting my drawbacks.
C1: I am the one committing sins, you are the terminators of all sins, I am involved (am dancing) in anger, pride and hatred.
You are the one who removes fear, [on the other hand] I am easily attracted to beauty and shadows(of false values)
C2: you are the one who protects those who surrender to you, I am the worst sinner, you are the one who enables getting over the mountain of difficulties.
I am [easily] influenced, you understand and protect, I have pride and conceit, you are an ideal
C3: I am unlucky, you are the lord of Indira, I don’t realise the reality of the past and present
O father purandaravithala you protect your devotees at all times.
***
ಮಂದಮತಿಯೋ ನಾನು ಮದನಜನಕನು ನೀನು
ಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ||
ಪಾಪಕರ್ತನು ನಾನು ಪಾಪನಾಶನು ನೀನು
ಕೋಪ ಮದ ಮತ್ಸರದಿ ಸುಳಿವೆ ನಾನು
ತಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪ ಛಾಯಕೆ ಮರುಳುಗೊಂಬೆನೋ ನಾನು ||
ಶರಣರಕ್ಷಕ ನೀನು ಪರಮಪಾತಕಿ ನಾನು
ದುರಿತಪರ್ವತವ ಪರಿಹರಿಪೆ ನೀನು
ಮರುಳುಗೊಂಬೆನು ನಾನು ಅರಿತು ರಕ್ಷಿಪೆ ನೀನು
ಗರುವಾಹಂಕಾರಿ ನಾನು ಅಗಮ್ಯ ನೀನು ||
ಮಂದಭಾಗ್ಯನು ನಾನು ಇಂದಿರಾಪತಿ ನೀನು
ಹಿಂದುಮುಂದಿನ ಸುದ್ದಿ ಅರಿಯದವ ನಾನು
ತಂದೆ ಶ್ರೀಪುರಂದರವಿಟ್ಠಲರಾಯನೆ
ಎಂದೆಂದು ಭಕ್ತರನು ಸಲಹುವೆಯೊ ನೀನು ||
*********