Showing posts with label ದೇವಾಧಿದೇವ ಶ್ರೀದೇವ ನಿರಂಜನ ಈಶ ಬಾರೊ mahipati. Show all posts
Showing posts with label ದೇವಾಧಿದೇವ ಶ್ರೀದೇವ ನಿರಂಜನ ಈಶ ಬಾರೊ mahipati. Show all posts

Tuesday, 13 April 2021

ದೇವಾಧಿದೇವ ಶ್ರೀದೇವ ನಿರಂಜನ ಈಶ ಬಾರೊ ankita mahipati

ದೇವಾಧಿದೇವ ಶ್ರೀದೇವ ನಿರಂಜನ ಈಶ ಬಾರೊ

ಕಾವ ಕರುಣ ಭವಭಂಜನ ಗುರು ಆತ್ಮ ಹಂಸ ಬಾರೊ ll ಧ್ರುವ ll


ಅಗಣಿತ ಗುಣ ಅಗಾಧ ಅಪಾರಾಗಮ್ಯ ಬಾರೊ

ನಿಗಮಗೋಚರ ನಿತ್ಯ ನಿರ್ಗುಣಾನಂದನುಪಮ್ಯ ಬಾರೊ

ಯೋಗಿ ಜನರ ಹೃದಯ ಮುನಿಮನೋರಮ್ಯ ಬಾರೊ

ಜಗದೊಳು ಭಕ್ತಜನರಿಗೆ ಪೂರಿತಕಾಮ್ಯ ಬಾರೊ ll 1 ll


ಝಗಝಗಿಸುವ ಜಗಜ್ಯೋತಿ ಜಗನ್ಮೋಹನ ಬಾರೊ

ಧಗಿ ಧಗಿಸುವ ತೇಜ ಹೊಳೆವ ಪುತ್ಥಳಿಯ ಚಿನ್ನ ಬಾರೊ

ಮಘ ಮಘ ಮಿಂಚುವ ಮಗುಟಮಣಿ ಗುಣರನ್ನ ಬಾರೊ

ಬಗೆಬಗೆಯಿಂದ ಸದ್ಗೈಸುವ ಪತಿತಪಾವನ್ನ ಬಾರೊ ll 2 ll


ಋಷಿ ಮುನಿವಂದಿತ ಸಾಧು ಜನ ಹೃದಯ ಬಾರೊ

ವಾಸವಾಗಿ ಸರ್ವ ಅಂತ್ರಯಾಮಿಲಿಹ ಗುಹ್ಯ ಬಾರೊ

ಭಾಸ್ಕರ ಕೋಟಿ ಸುತೇಜ ಪ್ರಕಾಶ ನಮ್ಮಯ್ಯ ಬಾರೊ

ದಾಸ ಮಹಿಪತಿಯ ರಕ್ಷಿಸುವ ಪ್ರಾಣ ಪ್ರಿಯ ಬಾರೊ ll 3 ll

***