Showing posts with label ಬಿನ್ನಹಕೆ ಬಾಯಿಲ್ಲವಯ್ಯಾ ಅನಂತ ಅಪರಾಧ ಎನ್ನಲ್ಲಿ purandara vittala BINNAHAKE BAAYILLAVAYYA ANANTA APARAADHA ENNALLI. Show all posts
Showing posts with label ಬಿನ್ನಹಕೆ ಬಾಯಿಲ್ಲವಯ್ಯಾ ಅನಂತ ಅಪರಾಧ ಎನ್ನಲ್ಲಿ purandara vittala BINNAHAKE BAAYILLAVAYYA ANANTA APARAADHA ENNALLI. Show all posts

Wednesday 15 December 2021

ಬಿನ್ನಹಕೆ ಬಾಯಿಲ್ಲವಯ್ಯಾ ಅನಂತ ಅಪರಾಧ ಎನ್ನಲ್ಲಿ purandara vittala BINNAHAKE BAAYILLAVAYYA ANANTA APARAADHA ENNALLI



ಬಿನ್ನಹಕೆ ಬಾಯಿಲ್ಲವಯ್ಯ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ||

ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕಭ್ರಾತರ ಮೋಹ ರಾಜಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ

ಅನ್ನಮದ ಅರ್ಥಮದ ಅಖಿಲವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದವು ಧಾತ್ರಿ ವಶವಾದ ಮದ
ಇನ್ನು ತನಗಿದಿರಿಲ್ಲವೆಂದೆಂಬ ಮದದಿಂದ ||

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡು ಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರವಿಠಲ ||
****

ರಾಗ ಕಾಂಭೋಜ ಝಂಪೆ ತಾಳ (raga, taala may differ in audio)

ರಾಗ : ಕಾಂಬೋದಿ  ತಾಳ : ಝಂಪೆ

Binnahake bayillavayya
Ananta aparadha ennalli iralagi ||pa||
Asurari ninna mareteno kayo hariye ||a.pa||

Sisumoha satimoha jananijanakara moha
Rasika brantiya moha rajamannane moha
Pasumoha bumoha bandhuvargada moha
Hasunulla abaranagala mohadimda ||1||

Annamada arthamada akila vaibavada mada
Munna prayada madavu rupamadavu
Tanna satvada mada dhatri vasavada mada
Innu tanagedurillaventemba madadimda ||2||

Ishtu dorakidare mattishtu bekembase
Ashtu dorakidaru mattashtarase
Kashta bedembase kadusukava kambase
Nashta jivanadase purandaravithala ||3||
***

pallavi

binnahake bAyillavayya annanta aparAdha ennalli iralAgi

caraNam 1

shishu mOha sati mOha janani janakara mOha rasika bhrAtara mOha rAjamOha
pashu mOha bhU mOha bandhuvargada mOha asurAri ninna maretano kAyo hariye

caraNam 2

annamada arttamada akhila vaibhavada mada munna prAyada madavu rUpamadavu
tanna satvada madavu dhAtri vashavAda mada innu tanagidirillavendemba madadinda

caraNam 3

iSTu dorakidare mattiSTu bEkambAse aSTu dorakidaru mattaSTarAse
kaSTa bEDembAse kaDu sukhava kAmbAse naSTa jIvanadAse purandara viTTala
****


ಬಿನ್ನಹಕೆ ಬಾಯಿಲ್ಲವಯ್ಯಾ 
ಅನಂತ ಅಪರಾಧ ಎನ್ನಲ್ಲಿ ಇರಲಾಗಿ                      ।।ಪ।।
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೇ          ।।ಅ.ಪ।।

ಶಿಶುಮೋಹ ಸತಿಮೋಹ ಜನನಿಜನಕರ ಮೋಹ 
ರಸಿಕ ಭ್ರಾಂತಿಯ ಮೋಹ ರಜಮನ್ನಣೆ ಮೋಹ 
ಪಶುಮೋಹ ಭೂಮೋಹ ಬಂಧುವರ್ಗದ ಮೋಹ 
ಹಸುನುಳ್ಳ ಆಭರಣಗಳ ಮೋಹದಿಂದ                     ।।೧।।

ಅನ್ನಮದ ಅರ್ಥಮದ ಅಖಿಳ ವೈಭವದ ಮದ 
ಮುನ್ನ ಪ್ರಾಯದ ಮದವು ರೂಪಮದವು 
ತನ್ನ ಸತ್ವದ ಮದ ಧಾತ್ರಿ ವಶವಾದ ಮದ 
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ                 ।।೨।।

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ 
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ 
ನಷ್ಟ ಜೀವನದಾಸೆ ಪುರಂದರವಿಠಲ                        ।।೩।।
****

ಬಿನ್ನಹಕೆ ಬಾಯಿಲ್ಲವಯ್ಯ || ಪ ||

ಅನಂತ ಅಪರಾಧ ಎನ್ನಲ್ಲಿ ಇರಲಾಗಿ || ಅಪ ||

ಶಿಶುಮೋಹ ಸತಿಮೋಹ

ಜನನಿ ಜನಕರ ಮೋಹ

ರಸಿಕಬ್ರಾತರ ಮೋಹ, ರಾಜಮೋಹ

ಪಶುಮೋಹ ಭೂಮೋಹ

ಬಂಧುವರ್ಗದ ಮೋಹ

ಅಸುರಾರಿ ನಿನ್ನ ಮರೆತೆ

ನಕಟಕಟ ಕಾಯೋ || ೧ ||

ಅನಮದ ಅರ್ಥಮದ

ಅಖಿಲ ವೈಭವದ ಮದ

ಮುನ್ನ ಪ್ರಾಯದ ಮದವು

ರೂಪ ಮದವು

ವೆಂತೆಂಬ ಮದದಿಂದ || ೨ ||

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂದಾಸೆ

ಅಷ್ಟು ದೊರಕಿದರೆ ಮತ್ತಿಷ್ಟರಾಸೆ

ಕಷ್ಟ ಬೇಡೆಂಬಾಸೆ

ಕಡು ಸುಖವ ಕಾಂಬಾಸೆ

ನಷ್ಟ ಜೀವನದಾಸೆ

ಪುರಂದರ ವಿಠಲ || ೩ ||
******