CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama
ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ||
ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕಭ್ರಾತರ ಮೋಹ ರಾಜಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ
ಅನ್ನಮದ ಅರ್ಥಮದ ಅಖಿಲವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದವು ಧಾತ್ರಿ ವಶವಾದ ಮದ
ಇನ್ನು ತನಗಿದಿರಿಲ್ಲವೆಂದೆಂಬ ಮದದಿಂದ ||
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡು ಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರವಿಠಲ ||
***
Pallavi
Binnahake bāyillavayya
Ananta aparādha ennalli iralāgi ||
Charaṇa 1
Śiśumōha satimōha jananijanakara mōha
Rasikabhrātara mōha rājamōha
Paśumōha bhūmōha bandhuvargada mōha
Asurāri ninna maretēno kāyo hariye ||
Charaṇa 2
Annamada arthamada akhilavaibhavada mada
Munna prāyada madavu rūpamadavu
Tanna satvada madavu dhātri vaśavāda mada
Innu tanagidirillavendemba madadinda ||
Charaṇa 3
Iṣṭu dorakidare mattiṣṭu bēkembaāse
Aṣṭu dorakidaru mattaṣṭarāse
Kaṣṭa bēḍembaāse kaḍu sukhava kāmbāse
Naṣṭa jīvanadāse purandaraviṭhala ||
***
Pronunciation Guide:
ā / ē / ī / ō: Long vowels (hold the sound longer).
ḍ / ḷ / ṇ: Retroflex sounds (tongue touches the roof of the mouth).
ś / ṣ: Sh-sounds (as in 'Shiva' or 'She').
ṣṭ: Combined hard 'S' and 'T' (as in 'Iṣṭu').
v / w: In Kannada transliteration, 'v' is often used, but it's a soft sound between 'v' and 'w
***
ಪುರಂದರದಾಸರ ಈ ಕೀರ್ತನೆಯು ಮನುಷ್ಯನ ಅಹಂಕಾರ ಮತ್ತು ಲೌಕಿಕ ವ್ಯಾಮೋಹಗಳ ಮುಚ್ಚುಮರೆಯಿಲ್ಲದ ಒಪ್ಪಿಗೆ ಹಾಗೂ ಭಗವಂತನಲ್ಲಿ ಮಾಡುವ ಮೊರೆಯಾಗಿದೆ.
ಸಾರಾಂಶ (Summary)
ದಾಸರು ಈ ಕೀರ್ತನೆಯಲ್ಲಿ ತಾನು ಮಾಡಿರುವ ಅಸಂಖ್ಯಾತ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ, "ದೇವನೇ, ನಾನು ಮಾಡಿದ ಅಪರಾಧಗಳು ಬೆಟ್ಟದಷ್ಟಿವೆ, ಹಾಗಾಗಿ ನಿನ್ನ ಮುಂದೆ ನಿಂತು ಪ್ರಾರ್ಥಿಸಲು ನನಗೆ ಬಾಯೇ ಬರುತ್ತಿಲ್ಲ" ಎಂದು ದೈನ್ಯದಿಂದ ಹೇಳುತ್ತಿದ್ದಾರೆ. ಸಂಸಾರಿಕ ವ್ಯಾಮೋಹಗಳು, ವಿವಿಧ ರೀತಿಯ ಮದಗಳು (ಅಹಂಕಾರ) ಮತ್ತು ಮುಗಿಯದ ಆಸೆಗಳ ಬಲೆಯಲ್ಲಿ ಸಿಲುಕಿ ನಿನ್ನನ್ನು ಮರೆತಿದ್ದೇನೆ, ಈಗ ನಿನ್ನನ್ನೇ ನಂಬಿದ್ದೇನೆ ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾರೆ.
ಪ್ರತಿ ಪದ್ಯದ ಅರ್ಥ (Verse-wise Meaning)
ಪಲ್ಲವಿ ಹಾಗೂ ಅನುಪಲ್ಲವಿ:
ಬಿನ್ನಹಕೆ ಬಾಯಿಲ್ಲವಯ್ಯ | ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||
ಅರ್ಥ: ಹರಿಯೇ, ನಿನ್ನ ಮುಂದೆ ನಿಂತು ಬೇಡಿಕೊಳ್ಳಲು (ಬಿನ್ನಹ ಮಾಡಲು) ನನಗೆ ಬಾಯಿಲ್ಲದಂತಾಗಿದೆ (ಅರ್ಹತೆಯಿಲ್ಲ). ಏಕೆಂದರೆ ನನ್ನಲ್ಲಿ ಎಣಿಸಲಾರದಷ್ಟು (ಅನಂತ) ತಪ್ಪುಗಳು ಮತ್ತು ಅಪರಾಧಗಳು ತುಂಬಿವೆ.
ಚರಣ ೧:
ಶಿಶುಮೋಹ ಸತಿಮೋಹ ಜನನಿಜನಕರ ಮೋಹ | ರಸಿಕಭ್ರಾತರ ಮೋಹ ರಾಜಮೋಹ |
ಪಶುಮೋಹ ಭೂಮೋಹ ಬಂಧುವರ್ಗದ ಮೋಹ | ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ||
ಅರ್ಥ: ಮಕ್ಕಳು, ಹೆಂಡತಿ, ತಂದೆ-ತಾಯಿ, ಸಹೋದರರು ಮತ್ತು ಬಂಧುಗಳ ಮೇಲಿನ ಅತಿಯಾದ ಪ್ರೀತಿಯಲ್ಲಿ (ಮೋಹ) ನಾನು ಮುಳುಗಿದ್ದೇನೆ. ಅಧಿಕಾರ, ಆಸ್ತಿ ಮತ್ತು ಐಶ್ವರ್ಯದ ವ್ಯಾಮೋಹಕ್ಕೆ ಬಿದ್ದು, ಅಸುರ ಸಂಹಾರಿಯಾದ ನಿನ್ನನ್ನು ನಾನು ಮರೆತುಬಿಟ್ಟೆ. ಹರಿಯೇ, ಈ ವ್ಯಾಮೋಹಗಳಿಂದ ನನ್ನನ್ನು ರಕ್ಷಿಸು.
ಚರಣ ೨:
ಅನ್ನಮದ ಅರ್ಥಮದ ಅಖಿಲವೈಭವದ ಮದ | ಮುನ್ನ ಪ್ರಾಯದ ಮದವು ರೂಪಮದವು |
ತನ್ನ ಸತ್ವದ ಮದವು ಧಾತ್ರಿ ವಶವಾದ ಮದ | ಇನ್ನು ತನಗಿದಿರಿಲ್ಲವೆಂದೆಂಬ ಮದದಿಂದ ||
ಅರ್ಥ: ಹೇರಳವಾದ ಅನ್ನ (ಸಂಪತ್ತು), ಹಣದ ಮದ, ವೈಭೋಗದ ಅಹಂಕಾರ, ಯೌವನದ ಅಮಲು ಮತ್ತು ರೂಪದ ಗರ್ವ ನನ್ನಲ್ಲಿ ತುಂಬಿದೆ. ನನ್ನ ಶಕ್ತಿ ಮತ್ತು ಅಧಿಕಾರದ ಮದದಿಂದ, ಈ ಜಗತ್ತಿನಲ್ಲಿ ನನಗೆ ಎದುರಾಳಿಯೇ ಇಲ್ಲ ಎಂಬ ಅಹಂಕಾರದಲ್ಲಿ ನಾನು ಮೆರೆದೆ. ಈ ಎಲ್ಲಾ ಮದಗಳು ನನ್ನನ್ನು ದಾರಿ ತಪ್ಪಿಸಿವೆ.
ಚರಣ ೩:
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ | ಅಷ್ಟು ದೊರಕಿದರು ಮತ್ತಷ್ಟರಾಸೆ |
ಕಷ್ಟ ಬೇಡೆಂಬಾಸೆ ಕಡು ಸುಖವ ಕಾಂಬಾಸೆ | ನಷ್ಟ ಜೀವನದಾಸೆ ಪುರಂದರವಿಠಲ ||
ಅರ್ಥ: ನನಗೆ ಸ್ವಲ್ಪ ಸಿಕ್ಕಿದರೆ ಇನ್ನಷ್ಟು ಬೇಕೆಂಬ ಆಸೆ ಹುಟ್ಟುತ್ತದೆ. ಅಷ್ಟು ಸಿಕ್ಕಿದರೂ ತೃಪ್ತಿಯಿಲ್ಲದೆ ಮತ್ತಷ್ಟು ಬೇಕೆಂದು ಆಶಿಸುತ್ತೇನೆ. ಜೀವನದಲ್ಲಿ ಕಷ್ಟವೇ ಬರಬಾರದು, ಸದಾ ಸುಖವೇ ಇರಬೇಕೆಂಬ ದುರಾಸೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಈ ವ್ಯರ್ಥವಾದ (ನಷ್ಟ) ಜೀವನದ ಆಸೆಗೆ ಬಿದ್ದಿರುವ ನನ್ನನ್ನು ಪುರಂದರವಿಠಲನೇ ನೀನೇ ಉದ್ಧಾರ ಮಾಡು.
ವಿಶೇಷ ಟಿಪ್ಪಣಿ: ಈ ಕೀರ್ತನೆಯು ಮಾನವನ ಸಹಜ ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತಾ, ಅಹಂಕಾರವನ್ನು ತೊರೆದು ದೇವರಿಗೆ ಶರಣಾಗುವ ದಾರಿಯನ್ನು ಬೋಧಿಸುತ್ತದೆ.
***
This famous composition by Purandara Dasa is a profound confession of human flaws. It reflects the realization that an individual’s ego and endless desires are the primary barriers to reaching the Divine.
Summary
In this hymn, the poet expresses a deep sense of shame. He says, "I have committed so many sins that I don't even have the face (or mouth) to pray to You." He lists the various types of attachments (Moha), prides (Mada), and insatiable greeds (Aase) that have consumed his life, causing him to forget God. The song is an act of total humility, asking Lord Purandara Vithala to forgive his countless transgressions and provide refuge.
Verse-wise Meaning
Pallavi & Anupallavi:
Binnahake baayillavayya | Ananta aparaadha ennalli iralaagi ||
Meaning: O Lord, I find myself speechless (I have no mouth) to make a request to You. I am so overwhelmed by the weight of the infinite sins and offenses I have committed that I feel unworthy even to speak Your name.
Verse 1:
Shishumoha satimoha jananijanaka moha | Rasikabhraatara moha raajamoha |
Pashumoha bhoomoha bandhuvargada moha | Asuraari ninna mareteno kaayo hariye ||
Meaning: I became trapped in the obsession with my children, my wife, and my parents. I was consumed by the love for my brothers, the lure of political power, and the attachment to my cattle and land. O Slayer of Demons, in the midst of all these worldly ties, I completely forgot You. Please protect me, O Hari!
Verse 2:
Annamada arthamada akhilavaibhavada mada | Munna praayada madavu roopamadavu |
Tanna satvada madavu dhaatri vashavaada madada | Innu tanagidirillavendemba madadinda ||
Meaning: I was blinded by the intoxication (pride) of having plenty of food, the pride of wealth, and the arrogance of luxury. I was drunk on the vanity of my youth, my physical beauty, and my own strength. I even harbored the ego of being a conqueror of the world, arrogantly believing that I had no equal or rival.
Verse 3:
Ishtu dorakidare mattishtu bekembaase | Ashtudorakidaru mattashtaraase |
Kashta bedembaase kadu sukhava kaambaase | Nashta jeevanadaase purandara vithala ||
Meaning: If I gain a little, I crave for more; even when I gain a lot, my greed only grows further. My mind constantly wishes to avoid all pain and seeks only intense pleasure. I have wasted my life chasing these fleeting, empty desires. O Purandara Vithala, save me from this destructive cycle.
**
Key Theme:
Mada (Pride): The poet identifies various forms of ego (wealth, youth, beauty) that distance us from the truth.
Moha (Attachment): The emotional bonds that act as shackles.
Sharanagati: The ultimate realization that only God's grace can erase a lifetime of errors.
***
ರಾಗ ಕಾಂಭೋಜ ಝಂಪೆ ತಾಳ (raga, taala may differ in audio)
ರಾಗ : ಕಾಂಬೋದಿ ತಾಳ : ಝಂಪೆ
Binnahake bayillavayya
Ananta aparadha ennalli iralagi ||pa||
Asurari ninna mareteno kayo hariye ||a.pa||
Sisumoha satimoha jananijanakara moha
Rasika brantiya moha rajamannane moha
Pasumoha bumoha bandhuvargada moha
Hasunulla abaranagala mohadimda ||1||
Annamada arthamada akila vaibavada mada
Munna prayada madavu rupamadavu
Tanna satvada mada dhatri vasavada mada
Innu tanagedurillaventemba madadimda ||2||
Ishtu dorakidare mattishtu bekembase
Ashtu dorakidaru mattashtarase
Kashta bedembase kadusukava kambase
Nashta jivanadase purandaravithala ||3||
***
pallavi
binnahake bAyillavayya annanta aparAdha ennalli iralAgi
caraNam 1
shishu mOha sati mOha janani janakara mOha rasika bhrAtara mOha rAjamOha
pashu mOha bhU mOha bandhuvargada mOha asurAri ninna maretano kAyo hariye
caraNam 2
annamada arttamada akhila vaibhavada mada munna prAyada madavu rUpamadavu
tanna satvada madavu dhAtri vashavAda mada innu tanagidirillavendemba madadinda
caraNam 3
iSTu dorakidare mattiSTu bEkambAse aSTu dorakidaru mattaSTarAse
kaSTa bEDembAse kaDu sukhava kAmbAse naSTa jIvanadAse purandara viTTala
****
ಬಿನ್ನಹಕೆ ಬಾಯಿಲ್ಲವಯ್ಯಾ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ ।।ಪ।।
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೇ ।।ಅ.ಪ।।
ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕ ಭ್ರಾಂತಿಯ ಮೋಹ ರಜಮನ್ನಣೆ ಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಹಸುನುಳ್ಳ ಆಭರಣಗಳ ಮೋಹದಿಂದ ।।೧।।
ಅನ್ನಮದ ಅರ್ಥಮದ ಅಖಿಳ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದ ಧಾತ್ರಿ ವಶವಾದ ಮದ
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ ।।೨।।
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರವಿಠಲ ।।೩।।
****
ಪರಮಾತ್ಮನಲ್ಲಿ ವಿನಂತಿ
ಬಿನ್ನಹಕೆ ಬಾಯಿಲ್ಲವಯ್ಯ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ ॥ ಪಲ್ಲವಿ ॥
ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕಭ್ರಾತರ ಮೋಹ ರಾಜಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ॥ ೧ ॥
ಅನ್ನಮದ ಅರ್ಥಮದ ಅಖಿಲ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದವು ಧಾತ್ರಿ ವಶವಾದ ಮದ
ಇನ್ನು ತನಗಿದಿರಿಲ್ಲವೆಂದೆಂಬ ಮದದಿಂದ ॥ ೨ ॥
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡು ಸುಖವ ಕಾಂಬಾಸೆ
ನಷ್ಟ ಜೀವನದಾಸೆ ಪುರಂದರವಿಠಲ ॥ ೩ ॥
*
summary
ಕ್ಷಣಕ್ಷಣಕ್ಕೂ ತಿಳಿದೂ ತಿಳಿಯದೇ ನಾವು ಮಾಡುತ್ತಿರುವ ತಪ್ಪುಗಳನ್ನು, ಅಪರಾಧಗಳನ್ನು ಮನ್ನಿಸೆಂದು ಪರಮಾತ್ಮನಲ್ಲಿ ವಿನಂತಿ ಮಾಡಿಕೊಳ್ಳುವ ಪರಿಯನ್ನು ಎಷ್ಟು ಅದ್ಭುತವಾಗಿ ನಮಗೆ ಶ್ರೀಮತ್ಪುರಂದರದಾಸಾರ್ಯರು ಹೇಳಿಕೊಡ್ತಿದ್ದಾರೆ...
ಲೌಕಿಕದ ಜೀವನವನ್ನು ನಡೆಸಲೇ ಬೇಕಾದವರು ನಾವು ಅಂತಹ ಜೀವನದಲ್ಲಿ ಏನೆಲ್ಲಾ ಬಾಂಧವ್ಯಗಳು, ಬಂಧನಗಳು, ಪಾಶಗಳು, ಮೋಹಗಳು. ಧನ, ರೂಪ ಮೊದಲಾದ ಎಂಥೆಂಥಾ ವಿಚಿತ್ರ ಮದಗಳನ್ನು, ಅಹಂಕಾರವನ್ನೂ, ಹೊಂದಿರುತ್ತೇವೆ. ಪರಮಾತ್ಮನ ಸ್ಮರಣೆ, ಪೂಜೆ, ಆರಾಧನೆಗಳಿಗೆ ಇವೆಲ್ಲವೂ ದೊಡ್ಡ ಅಡ್ಡಿಗಳು.
ದಾಸರಾಯರು ಈ ಕೃತಿಯಲ್ಲಿ ಅರಿಷಡ್ವರ್ಗಗಳಲ್ಲಿ ಮೋಹ, ಮದ ಮತ್ತು ಲೋಭಗಳ ಕುರಿತು ತಿಳಿಸಿದ್ದಾರೆ.
ಎಲ್ಲಾ ಅರಿಷಡ್ವರ್ಗಳೂ ಕೂಡ ಅಪರಾಧಗಳನ್ನೇ ಮಾಡಿಸುತ್ತವೆ. ಮತ್ತೂ ಎಲ್ಲವಕ್ಕೂ ಸಹ ಮುಖ್ಯ ಕಾರಣವೆಂದರೆ ಅದು ಅಜ್ಞಾನ.
ಇದರಿಂದಲೇ ಕಾಮ, ಬಯಕೆ. ಅದು ಸಿಗದಿದ್ದಾಗ ಕ್ರೋಧ. ಸಿಕ್ಕರೂ ತನಗೆ ಮಾತ್ರ ಸಿಗಬೇಕು, ಎಲ್ಲವೂ ಸಿಗಬೇಕು ಎನ್ನುವ ಲೋಭ. ಮುಂದುವರೆದು ತನ್ನವರ ಮೇಲೆ, ತಮ್ಮಿಷ್ಟದವರ ಮೇಲೆ ಅದು ವಸ್ತುವೋ ಅಥವಾ ಜೀವವೋ ಅದರ ಮೇಲೆ ಮೋಹ. ತನಗೆ ತನ್ನ ಕಡೆಯವರಿಗೆ ಮಾತ್ರ ತಾವು ಬಯಸಿದ್ದು ಸಿಕ್ಕಾಗ ತನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುವ ಮದ. ತನಗೆ ತನ್ನ ಕಡೆಯವರಿಗೆ ಸಿಗದಿದ್ದುದು ಮತ್ತೊಬ್ಬರಿಗೆ ಸಿಕ್ಕಾಗ ಪಡುವ ಮತ್ಸರ. ಹೀಗೆ ಒಂದಕ್ಕೊಂದು ಸಂಬಂಧಗಳು ಹೊಂದಿದ್ದು, ಎಲ್ಲವಕ್ಕೂ ಮುಖ್ಯ ಅಜ್ಞಾನ.
ಈ ಅಜ್ಞಾನ ಅಂದ್ರೆ ತನ್ನಲ್ಲಿ ಅನಂತ ಅಪರಾಧಗಳು ಇವೆ ಎನ್ನುವ ಜ್ಞಾನವೂ ಕೂಡ ಜೀವಿಗೆ ಬರುವುದು ದುರ್ಲಭ. ಹೀಗೆ ನನ್ನಲ್ಲಿ ಅನಂತ ಅಪರಾಧಗಳು ಇವೆ ಸ್ವಾಮಿ, ನಿನ್ನ ಹ್ಯಾಗೆ ಪ್ರಾರ್ಥಿಸಲಿ ನೀನೇ ತಿಳಿಸೋ? ಎಂದು ಸಾಧಕನಾದವನು ಕ್ಷಣಕ್ಷಣಕ್ಕೂ ಪರಮಾತ್ಮನನ್ನು ಬೇಡುವುದನ್ನು ಕಲಿಸುತ್ತಿದ್ದಾರೆ..
ಮೇಲೆ ತಿಳಿಸಿದ ಎಲ್ಲ ಮೋಹ, ಅಹಂಕಾರಗಳನ್ನು ಬಿಡಿಸಿ, ಸಾಧನೆಯ ಸರಿಯಾದ ಹಾದಿಯಲ್ಲಿ ನಡೆಯುವಂತೆ ಮಾಡಪ್ಪಾ ಎಂದು ಪರಮಾತ್ಮನಲ್ಲಿ ಸರ್ವಾತ್ಮನಾ ಶರಣಾಗುವುದನ್ನು ಶ್ರೀ ಪುರಂದರ ದಾಸರಾಯರು ತಿಳಿಸಿಕೊಡುತ್ತ ನಮಗೆ ಪಾಠ ಕಳಿಸುತ್ತಿದ್ದಾರೆ. ಅವರು ತೋರಿದ ಹಾದಿಯಲ್ಲಿ ನಡೆಯುವಂತೆ ಮಾಡಲಿ ಎಂದು ಶ್ರೀಮತ್ಪುರಂದರದಾಸರಾಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ಶ್ರೀಕೃಷ್ಣ ಪರಮಾತ್ಮನಲ್ಲಿ ಶರಣಾಗುತ್ತಾ..
-Smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
No comments:
Post a Comment