Showing posts with label ಳಳ- RSS- ಪುಟಿದು ಚಿಮ್ಮುತಿದೆ others PUTIDU CHIMMUTIDE rss. Show all posts
Showing posts with label ಳಳ- RSS- ಪುಟಿದು ಚಿಮ್ಮುತಿದೆ others PUTIDU CHIMMUTIDE rss. Show all posts

Friday, 24 December 2021

ಪುಟಿದು ಚಿಮ್ಮುತಿದೆ others PUTIDU CHIMMUTIDE rss



RSS song  

 ಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು ಹೃದಯದೊಳಗಿನಿಂದ

ಸೆಡೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ                || ಪ ||


 

ಶುಭವ ಅರುಹುತಿದೆ ಶುಭ್ರ ಮುಂಜಾವು ಭಾಸ್ಕರನ ಕಿರಣ ಭಾಷ್ಯ

ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ

ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ

ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ                || 1 ||


ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ

ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ

ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ

ಸ್ಪಷ್ಟ ಸಂದೇಶ ಗಟ್ಟಿಯಾಗಿಹುದು ಸಂಚೆಲ್ಲ ಛಿದ್ರ ಛಿದ್ರ                     || 2 ||


 

ಶತಮಾನದೊಳಗೆ ಎಲ್ಲೆಲ್ಲು ಸಂಘ ಪರಿಣಾಮ ದೇಶ ವ್ಯಾಪ್ತ

ಮನೆ ಮನೆಗಳಲ್ಲು ತನುಮನಗಳಲ್ಲು ಮೊಳೆದಿಹುದು ಒಂದೆ ಭಾವ

ಬಿತ್ತಿ ಒಮ್ಮತವ ಅಳಿಸಿ ತರತಮವ ಗಳಿಸುವೆವು ತಾಯ ಒಲವ

ಭಾರತ ಮಾತೆಯ ವಿಶ್ವಗುರುವಾಗಿ ಮೆರೆಸುವುದೆ ನಮ್ಮ ಧ್ಯೇಯ         || 3 ||

***