Showing posts with label ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ karpara narahari. Show all posts
Showing posts with label ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ karpara narahari. Show all posts

Monday, 2 August 2021

ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ ankita karpara narahari

ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ


ಚಿಂತಿಸು ಮನವೆ ನಿರಂತರ ಶ್ರೀಮದ

ನಂತಗಿರಿಯಲಿ ನಿಂತು ಭಜಕರ

ಚಿಂತಿತಪ್ರದ ನಂತಶಯನನ ಅ.ಪ


ಶಾಂತ್ಯಾದಿ ಗುಣಭರಿತ ಮಹಂತ ಮುನಿ ಮಾ

ರ್ಕಾಂಡೇಯಗೊಲಿದು ಸತತ ಪರ್ವತದಿ ಲಕ್ಷ್ಮೀ

ಕಾಂತನೆಸುರ ಸಹಿತ ಸನ್ನಿಹಿತನೆನುತ ಕಂತುಹರನುತ

ನಂತ ಮಹಿಮನ ಸಂತಸದಿ ಸಂತುತಿಸುತಲಿ ತ-

ಮ್ಮಂತರಂಗದಿ ಚಿಂತಿ ಸುವರಘಧ್ವಾಂತ

ದಿನಕರಾನಂತ ದೇವನ 1


ನಾರ ಶಿಂಹನದರ್ಶನ ಕೊಳ್ಳುತಿರೆ ಮುನಿ ಬಲ

ದ್ವಾರದಿಂದಲಿ ಪ್ರತಿದಿನ ವಿರುತಿರೆ ಪ್ರಥಮ

ದ್ವಾದಶಿಯೊಳು ಸಾಧನ ತಕ್ಷಣ ಪ್ರಸನ್ನ

ಸೂರ್ಯಸುತನ ಉದಯದಲಿ ಭಾಗೀರಥಿಯು ಪು

ಷ್ಕರಣಿಯೊಳು ಬರೆ ಪಾರಿಜಾತದ ಭೂರುಹಂಗಳ

ಚಾರುರೂಪವ ತೋರಿದಾತನ 2


ನೀರಜಾಸನ ವಂದಿತ ಬಂಗಾರಮಕುಟ

ಕೇಯೂರ ಕಂಕಣ ಭೂಷಿತ ಚಕ್ರಾದಿ ಚಿನ್ಹಿತ

ಚಾರುಶಿಲೆಯೊಳು ಸನ್ನಿಹಿತ ಭಜಕರನು ಪೊರೆಯುತ

ವಾರವಾರಕೆ ಭಕುತಜನ ಪರಿವಾರದಿಂ ಸೇವೆಯನು ಕೊಳ್ಳುತ

ಧಾರುಣಿಯೊಳು ಮೆರೆವ ಕಾರ್ಪರ ನಾರಶಿಂಹಾತ್ಮಕ ಸ್ವರೂಪನ3

****