kruti-ಸರಗೂರು ವೆಂಕಟವರದಾರ್ಯರು
ಶೇಷಾದ್ರಿಯನು ನೋಡಿರೊ-ಸೇವಕ ಪರಿ- ತೋಷಾದ್ರಿಯಿದು ಕಾಣಿರೋ ಪ
ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ.
ಸಣ್ಣದಾದರು ಗಿರಿ ರನ್ನವ ಪೊಲುವ- ದರ್ಣವಶಯನನ ಕಣ್ಣಿಲಿ ಕಾಣಿಪ 1
ಬಗೆಬಗೆ ವೃಕ್ಷಗಳು-ಬನಂಗಳು-ಬಗೆಬಗೆ ¥ಕ್ಷಿಗಳು ಬಗೆಬಗೆಮೃಗಗಳು ಸೊಗಸಿನೊಳಿರೆಬಹು ಬಗೆಬಗೆ ಧಾತುಗಳಿಗೆ ನೆಲೆಯಾಗಿಹ 2
ಯುಗಗಳ ಸಂಖ್ಯೆಯೊಳು-ನಾಮಂಗಳು- ಯುಗಮೊದಲೊಳಗೆ ಪನ್ನಗಗಿರಿಯೆನೆ ತ್ರೇತಾ ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3
ದ್ವಾಪರಯುಗದೊಳಗೆ-ವೆಂಕಟನಾಮ- ವೀಪರ್ವತಕ್ಕೊದಗೆ ಶ್ರೀ ಪುಲಿಗಿರಿಯೆಂಬ ರೂಪವೀಯುಗದೊಳು ಶ್ರೀಪತಿಯಿತ್ತನಿರೂಪದೊಳೊಪ್ಪುವ 4
ದೂರದಿ ಶೋಭಿಸುವ ದುರ್ಜನರಿಗೆ-ದೂರನಮಂದಿರವ ವರದ ವಿಠಲ ನಿಹ 5
***