Showing posts with label ಹರಿಯೇ ಶಿರಿಯರುಣ vijaya vittala ankita suladi ಸಾಧನ ಸುಳಾದಿ HARIYE SHIRIYARUNA SADHANA SULADI. Show all posts
Showing posts with label ಹರಿಯೇ ಶಿರಿಯರುಣ vijaya vittala ankita suladi ಸಾಧನ ಸುಳಾದಿ HARIYE SHIRIYARUNA SADHANA SULADI. Show all posts

Friday, 1 October 2021

ಹರಿಯೇ ಶಿರಿಯರುಣ vijaya vittala ankita suladi ಸಾಧನ ಸುಳಾದಿ HARIYE SHIRIYARUNA SADHANA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಶ್ರೀಹರಿಯೇ ಸರ್ವೋತ್ತಮನೆಂದು ತಿಳಿದು , ತರತಮ್ಯ ಪಂಚಭೇದವರಿತು , ವೈಷ್ಣವರಾಗಿ ಸಾಧನದ ಬಗೆಯನ್ನು ತಿಳಿ.) 


 ರಾಗ ವರಾಳಿ 


 ಧ್ರುವತಾಳ 


ಹರಿಯೇ ಶಿರಿಯರುಣ ಸರಸಿಜದಳದವೋಲು

ಚರಣ ಯುಗಳವನ್ನು ಶಿರದಲ್ಲಿಟ್ಟು

ಮರುತ ಮತಾಂಬುಧಿಯೊಳಗಿದ್ದು ತತ್ವ ತಾ -

ತ್ಪರಿಯ ತಾರತಮ್ಯಂಗಳನು ಗ್ರಹಿಸಿ

ಹರಿ ಪರಾಪರನೆಂದು ಪರಿಪರಿಯಲ್ಲಿ ತಿಳಿದು

ಪರಿಶುದ್ಧನಾದ ವೈಷ್ಣವನೆನಿಸಿ

ಪುರುಷೇಶ್ವರ ನಾಮ ವಿಜಯವಿಟ್ಠಲನಂಘ್ರಿಗೆ 

ಎರಗು ಬೆರದಾಡು ವಿವರಗಳ ಬೇಡು ॥ 1 ॥ 


 ಮಟ್ಟತಾಳ 


ಹಿರಿ ವೊಲಿವಳು ಪರಮೇಷ್ಟಿ ವೊಲಿವನು

ಹರ ಸುರಪಾದ್ಯರು ಹರುಷದಿ ವೊಲಿವರು

ನರನುತ್ತಮನೆಂದು ಚರಿಪರಿವನಲ್ಲಿ

ನರ ವಿಜಯವಿಟ್ಠಲರಘಳಿಗೆ ವಲಿಯೆ 

ದುರಿತ ದುರ್ಗತಿ ಪರಿಹಾರವಾಗೋವು ॥ 2 ॥ 


 ತ್ರಿವಿಡಿತಾಳ 


ಹರಿದಾಸರೊಂದು ಚರಣವಿಟ್ಟ ಭೂಮಿ

ಕುರುಕ್ಷೇತ್ರಕ್ಕಧಿಕವೆಂದೆನಿಸುವದು

ಹರಿದಾಸರ ಪದಧೂಳಿ ಸೋಂಕಲು ಮಹ -

ದುರಿತ ಶೈಲಂಗಳು ಉರುಳುವವೊ

ಹರಿದಾಸರ ಸಂಗ ನಿರುತ ನಿರ್ಮಳಾಂಗ

ಸುರರಿಗಧಿಕ ಮುಪ್ಪುರದೊಳಗೆ

ಪುರುಷನಾಮಕ ರಂಗ ವಿಜಯವಿಟ್ಠಲನ್ನ 

ಶರಣರ ನಂಬಲು ಸಂಸಾರ ಹರವೊ ॥ 3 ॥ 


 ಝಂಪೆತಾಳ 


ಮುದ್ರೆ ಇಲ್ಲದ ಬದುಕು ಎಲ್ಲೆ ಜೋಕೆ ಇಲ್ಲ

ಮುದ್ರೆ ಇಲ್ಲದ ಹೊನ್ನು ಹಣಕಾಸು ಸಲ್ಲವು

ಮುದ್ರೆ ಇಲ್ಲದ ರಾಜ ಪಟ್ಟಕ್ಕೆ ಸಲ್ಲನು

ಮುದ್ರಾಂಕಿತ ರಹಿತ ಮಾನವನು ದಾನವನು

ಮುದ್ರೆ ಇಲ್ಲದೆ ಸಮುದ್ರನಾದರೇನು

ಭದ್ರಗತಿಗೆ ಸಲ್ಲ ಎಂದಿಗೆ ಕಾಣಿರೊ

ಸಧೃತನಾಮ ಶ್ರೀವಿಜಯವಿಟ್ಠಲರೇಯನ 

ಮುದ್ರೆ ಧರಿಸದವನು ಛುದ್ರ ಅಭದ್ರ ॥ 4 ॥ 


 ರೂಪಕತಾಳ 


ಯತಿಯಾದರೇನು ತಪುತ ಮುದ್ರೆ ಇಲ್ಲದಿರೆ

ಮತಿವಂತರು ನಮಿಸುವದು ಸಲ್ಲ

ಸತತದಿ ಜಪಿಸಿದರು ಮತಿ ಇಲ್ಲದ

ನಿತ್ಯ ಚತುರವಾಗಿದ್ದ ನರಕವನುಂಡು

ಪತಿತ ಜೀವಿಯಾಗಿ ಗತಿ ತಪ್ಪಿ ಭಾರತಿ -

ಪತಿ ಗದೆಯಿಂದ ಪ್ರಚೂರ್ನನಾಗಿ

ಶತಕಲ್ಪವಾದರು ನಿತ್ಯ ನರಕದಲ್ಲಿ

ಅತಿಶಯ ತಾಡನೆ ಇಂದ ತನ್ನ

ತತಿಸಹಿತ ಇಪ್ಪರು ಶ್ರುತಿ ಅರ್ಥ ಪ್ರಮಾಣ

ಇತರ ಸಂಶಯ ಬಿಟ್ಟು ಮುದ್ರೆ ಧರಿಸೆ

ಶತನಾಮ ವಿಜಯವಿಟ್ಠಲನ ಮುದ್ರಾಂ -

ಕಿತದಲ್ಲಿ ಮುಕುತಿ ಕುಮತಿಯನ್ನು ಬಿಡು ಬಿಡು ॥ 6 ॥ 


 ಅಟ್ಟತಾಳ 


ವೀರ ವೈಷ್ಣವನಾಗೆ ದುರಿತವೆ ಪರಿಹಾರ

ಮಾರಿಗಳು ನಿಂದಿರದೆ ಪೋಗುವವು

ಸಾರಿ ಸಾರಿಗೆ ನಿಜ ದಾಸರನು ಸಾರೆ

ಸಾರೆ ಪರಮ ಗತಿ ಸಂಸಾರ ವಾರಿಧಿ

ಪಾರು ಗೈಸುವದು ಆಲಸ್ಯ ಮಾಡದೆ

ಧಾರುಣಿಯೊಳು ಹರಿ ಶರಣರಿಗೆ ಪಡಿಯೆ

ಭಾರಭೃತ್ ನಾಮ ವಿಜಯವಿಟ್ಠಲನ್ನ 

ಸೇರಿದವರ ಪಾದ ಸೇರಲು ನಿರ್ವಾಣಾ ॥ 6 ॥ 


 ಆದಿತಾಳ 


ಅರಸು ಒಲಿದರೆ ಪರಿವಾರ ಕರಸಾದೆ

ಅರಸಿಕೊಳುತ ಬಂದು ಅವನೊಡನೆ ಇದ್ದು

ಚರಿಸುತಲಿ ನರಹರಿಯಾರಾಧನಿಗೆ

ಪರಿಪೂರ್ಣವಾಗಿ ಸಾರಥಿಯಂತೆ ನಡಿಸುವರು

ವರಹನಾಮಾ ಶ್ರೀವಿಜಯವಿಟ್ಠಲನ್ನ 

ಧೊರೆತನದಾಳುಗಳ ಭಾಗ್ಯವಿನ್ನೆಂತೋ ॥ 7 ॥ 


 ಜತೆ 


ಹರಿ ಸರ್ವೋತ್ತಮನೆಂದು ಅರಿದ ದಾಸರಿಗೆ ನಮಿಸು

ವರಾರುಹಾ ವಿಜಯವಿಟ್ಠಲನು ಒಡನೆ ಇಪ್ಪ ॥

***