..
kruti by muddumohana dasaru
ವಿಠಲಾ ಎನ್ನಿರೊ ಸುಜನರೆಲ್ಲಾ ಪ
ವಿಠಲಾ ಎಂದಾರೆ ಸುಟ್ಟುಹೋಗೊದು ಪಾಪ ಅ.ಪ
ಪ್ರಾತಃ ಕಾಲದೊಳು ಸ್ನಾನಾದಿಕರ್ಮ ಮುಗಿಸೀವಿಠಲಾ....
ವಾತದೇವನ ದ್ವಾರ ಅರ್ಪಿಸುತ್ತಾ ನೀವು | ವಿಠಲಾ....1
ಗುರುಗಳಲ್ಲಿಗೆ ಪೋಗಿ ವಂದಿಸಿ ಮೆಲ್ಲಾನೆ ವಿಠಲಾ....
ಮರÀುತಮತದ ಸಚ್ಛಾಸ್ತ್ರಗಳ ನೋಡುತಾ ವಿಠಲಾ.... 2
ಪಂಚÀಭೇದ ಪ್ರಾಪಂಚ ಸರ್ವವು ತಿಳಿದು ವಿಠಲಾ...
ಪಂಚಬಾಣನಯ್ಯ ಪಂಚರೂಪದಿ ತೋರುವಾ ವಿಠಲಾ.... 3
ಪ್ರಾರಂಭಮಾಡಿ ಪರಮೇಷ್ಠಿ ಪರಿಯಂತ ವಿಠಲಾ....
ಶ್ರೀಪ್ರಣವ ಪ್ರತಿಪಾದ್ಯಗಿವರು ಪ್ರತಿಬಿಂಬರೆಂದು ವಿಠಲಾ.... 4
ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು ವಿಠಲಾ....
ಆತುಮಾಂತಾರಾತ್ಮನೆಂದು ಕೂಗುತ ಒಮ್ಮೆ ವಿಠಲಾ.... 5
ತೀರ್ಥಕ್ಷೇತ್ರಗಳಿಗೆ ಪೋಗಿ ಬರುವಾಗ ವಿಠಲಾ....
ಪಾರ್ಥಸಖನ ಪ್ರೇರಣೆಯಿಂದ ಮಾಡಿದೆವೆಂದು ವಿಠಲಾ.... 6
ನಂಬೀದ ಜನರೀಗೆ ಬೆಂಬಲನಾಗುವ ವಿಠಲಾ....
ಸಂಭ್ರಮದಿಂದಾ ಸಂರಕ್ಷಿಸುವನೆ ಇವನೂ ವಿಠಲಾ.... 7
ಕಂಚಿಕಾಳಾಹಸ್ತಿ ಶ್ರೀರಂU ಮೊದಲಾಗಿರುವ ವಿಠಲಾ...
ವಂಚನೆಯಿಲ್ಲಾದೆ ಭಜಿಸಿದವರ ಪೊರೆವಾ ವಿಠಲಾ.... 8
ಪಂಚಪ್ರಾಣಾರಲಿನಿಂತು ಕಾರ್ಯಮಾಳ್ಪ ವಿಠಲಾ....
ಸಂಚಿತಾಗಾಮಿ ಕರ್ಮ ಇವನಿಂದ ನಾಶವೆಂದು ವಿಠಲಾ.... 9
ಊಧ್ರ್ವಪುಂಡ್ರಗಳು ದ್ವಾದಶನಾಮ ಇಡುವಾಗ ವಿಠಲಾ....
ಶುದ್ಧನಾಗೀ ಶುಭ್ರಹೊಸ ವಸ್ತ್ರ ಹೊದುವಾಗ ವಿಠಲಾ..... 10
ಪಂಚಮುದ್ರೆಗಳಲಿ ಪಂಚರೂಪದಿ ಇರುವ ವಿಠಲಾ...
ನಿರ್ವಂಚನಾಗಿ ಧರಿಸಿದವರಿಗೊಲಿವಾ ವಿಠಲಾ... 11
ವಾದ್ಯತುಂಬಿಸಿ ಶಿರಸಿನ ಪರಿಯಂತ ವಿಠಲಾ...
ವೇದೈಕವೇದ್ಯ ವಿಶ್ವಾಮೂರ್ತಿ ಕಾರ್ಯಗಳೆಂದು ವಿಠಲಾ.... 12
ಚೇತನಾ ಚೇತನ ಜಡದೊಳಗೆ ನೀವು ವಿಠಲಾ...
ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ ಒಲಿವ ವಿಠಲಾ.... 13
ಈ ರೀತಿಂiÀiಲಿ ಅನಂತಾನಂತ ಪರಿ ಚಿಂತಿಸಿ ವಿಠಲಾ...
ಶಾರೀರದೊಳಿÀರುವ ಪ್ರಾಜ್ಞನಲಿ ಕೂಡಿಸಿ ವಿಠಲಾ.... 14
ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ ನಿಂತ ವಿಠಲಾ...
ಮುದ್ದುಮೋಹನ್ನ ವಿಠಲನೆ ಜಗಕೆ ಕರ್ತು ವಿಠಲಾ..... 15
***