Showing posts with label ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ hayavadana PRAANANA NODIRAI MUKHYAPRANANA PAADIRAI. Show all posts
Showing posts with label ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ hayavadana PRAANANA NODIRAI MUKHYAPRANANA PAADIRAI. Show all posts

Saturday, 11 December 2021

ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ankita hayavadana PRAANANA NODIRAI MUKHYAPRANANA PAADIRAI



ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ಪ.


ಕ್ಷೋಣಿಯೊಳಗೆ ಎಣೆರಹಿತ ಪಾವನಚರಿತ ಸದ್ಗುಣಭರಿತಅ.ಪ.


ಮರ್ಕಟ ರೂಪಿಲೆ ಅವತರಿಸಿದ ಅಂಜನೆ ಸುತನೊ ಮಹಾ ಅದ್ಭ್ಭುತನೊತರÀಣಿ ಮಂಡಲಕೆ ಮುಟ್ಟಿಹಾರಿದ ಬಲದ ಶ್ರುತಿಯೊ ವಿಕ್ರಮಗತಿಯೊಸುರರಾಯುಧ ನೆಗ್ಗಿಸಿದ ಕಪಿಯಗ್ರಣಿಯೊ ವಜ್ರದ ಖಣಿಯೊಶರಣ ವಂದಿತ ಚರಿತ ಮೂರ್ಲೋಕ ಗುರುವೊ ಕಲ್ಪತರುವೊ1


ರಾಮ ಪದಾಂಬುಜ ಬಿಂಬಪರಾಗ ಮಧುಪನೊ ದೇವಾಧಿಪನೊತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೊಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ 2


ಕ್ಷಣದೊಳು ಸಂಜೀವನ ಗಿರಿಯನೆ ತಂದ ತಪವೊ ತಾ ನೃಪಹಿತವೊವನಜನಾಭನ ಪಾದ ಪಡೆದಂಥ ಪದವೊ ಸಾಗರ ಮದವೊನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊಅನುದಿನದಲಿ ಹಯವದನನ ನೆನೆಯುವ ದಯವೊ ಗತಿ ಆಶ್ರಯವೊ3

***