Showing posts with label ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ gopalakrishna vittala. Show all posts
Showing posts with label ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ gopalakrishna vittala. Show all posts

Monday, 2 August 2021

ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ ankita gopalakrishna vittala

ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ

ಯಾರು ಕರ ಪಿಡಿವರೈ ತೋರು ಶೌರೇ

ವಾರಿಜಾನಾಭ ಭಯ ತೋರುವರೆ ಕರುಣಾಳು

ಬಾರದಿರುವಂಥ ಅಪರಾಧವೇನೆಲೊ ಹರೀ ಪ.


ಕನಸಿನೊಳಗೊಂದು ಪರಿ ಮನಸಿನೊಳಗೊಂದು ಪರಿ

ವನಜನಯನನೆ ಭಯವ ತೋರಿ ತೋರೀ

ಚಿನುಮಯಾತ್ಮಕ ಎನ್ನ ಪರಿಕಿಸುವ ಪರಿ ಏನೋ

ಬಿನಗುದೈವರ ಗಂಡ ಪರಿಹರಿಸು ಗಂಡಾ1

ಕರಿಯ ನೀರೊಳು ಕಾಯ್ದೆ ಪೊರೆದೆ ನೀರೊಳು ಮನುವ

ಧರಣಿ ಪ್ರಹ್ಲಾದರನು ಜಲದಿ ಸಲಹೀ

ಬಿರುದು ಪೊತ್ತವ ಎನ್ನ ಪರಿಯನರಿಯೆಯೆ ದೇವ

ಪೊರೆವರಿನ್ನಾರು ಹೇ ಕರುಣಾಳು ಶರಣೂ 2

ಮುಳುಗಿಹೆನು ಸಂಸಾರ ಗಣಿಸಲಾಗದ ಕರ್ಮ

ಫಣಿಶಾಯೆ ಕಡೆಮಾಡಿ ಕರವ ಪಿಡಿದೂ

ಧಣಿಸು ನಿನ ದಾಸತ್ವ ಧರೆಯೆ ಮೇಲ್ ಡಂಗುರದೀ

ಘಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು 3

****