Showing posts with label ಮಲಗು ಮಲಗೆಲೊ ಸುಮ್ಮನೆ ಸುಕುಮಾರ prasanna. Show all posts
Showing posts with label ಮಲಗು ಮಲಗೆಲೊ ಸುಮ್ಮನೆ ಸುಕುಮಾರ prasanna. Show all posts

Saturday, 28 December 2019

ಮಲಗು ಮಲಗೆಲೊ ಸುಮ್ಮನೆ ಸುಕುಮಾರ ankita prasanna

ಮಲಗು ಮಲಗೆಲೊ ಸುಮ್ಮನೆ ಸುಕುಮಾರ
ಚೆಲುವ ಜೋಗುಳವ ಪಾಡುವೆ ಗೋಪಾಲ ||ಪ||

ಲಲನಾಮಣಿಯರು ಸುಲಭದಿ ನಿನ್ನನು
ಕಲಭಾಷಣದಿಂದ ಸೆಳೆಯ ಬಯಸುತಿಹರೋ ||ಅ.ಪ||

ಭೋಗಿಶಯನ ಹರಿ ಈ ಜಗದೊಳಗೆ
ಈಗ ಬಂದಿರುವ ಜಾಗವನರಿಯದೆ
ಯೋಗಿ ಜನರು ಅನುರಾಗದಿಂದ ನಿನ್ನ
ಸಾಗಿಸಲಿರುವರೊ ಕೂಗದೆ ಸುಖದಲಿ ||1||

ದುರುಳ ಶಕಟನನು ಮುರಿದ ಕೋಮಲದ
ಚರಣ ಕಮಲಗಳು ಉರಿಯುತಲಿದ್ದರು
ಮರೆಯಲದನು ಸುವಿನೋದವೀಯುವ
ಸರಸಪದಗಳನು ಪರಿಪರಿಯರುಹುವೆನೊ ||2||

ಎನ್ನಯ ಕರಗಳು ನೋಯುತಲಿರುವುವು
ಚಿನ್ಮಯ ರೂಪನೆ ನಿದ್ರೆಯ ಮಾಡೊ
ದಧಿ ಪಯ ಬೆಣ್ಣೆಯ ಕೊಡುವೆ|
ಪ್ರಸನ್ನ ಸುಹೃದಯದಲಿ ||3||
******