RAO COLLECTIONS SONGS refer remember refresh render DEVARANAMA
..
ಪೊಗಳು ಮನವೆ ನೀ ಯುಗಯುಗದಲಿ ಘನ
ಸೊಗಸಿಲಿಂದ ಗುರು ಜಗನ್ನಾಥರಾಯರ ಪ
ಪುಲ್ಲಜಾಂಡದಿ ಸಿರಿವಲ್ಲಭನ ಪದ
ಪಲ್ಲವ ಪೂಜಿಸಿದ ಸಹ್ಲಾದರಾಯರ 1
ಮಾನವಿಕ್ಷೇತ್ರದಿ ಧೇನಿಪ ಸುಜನರ
ಮಾಣದೆ ಕಾಯುವ ಮಹಾನುಭಾವರ ಸದಾ 2
ಧರಿವರ ಶಾಮಸುಂದರ ಚರಿತಾಮೃತ
ಸರಸ ಸುಗ್ರಂಥವ ವಿರಚಿಸಿದೋಡೆಯರ 3
***