Wednesday, 1 September 2021

ಪೊಗಳು ಮನವೆ ನೀ ಯುಗಯುಗದಲಿ ಘನ ಸೊಗಸಿಲಿಂದ ಗುರು ಜಗನ್ನಾಥರಾಯರ ankita shyamasundara

 ..

ಪೊಗಳು ಮನವೆ ನೀ ಯುಗಯುಗದಲಿ ಘನ

ಸೊಗಸಿಲಿಂದ ಗುರು ಜಗನ್ನಾಥರಾಯರ ಪ


ಪುಲ್ಲಜಾಂಡದಿ ಸಿರಿವಲ್ಲಭನ ಪದ

ಪಲ್ಲವ ಪೂಜಿಸಿದ ಸಹ್ಲಾದರಾಯರ 1


ಮಾನವಿಕ್ಷೇತ್ರದಿ ಧೇನಿಪ ಸುಜನರ

ಮಾಣದೆ ಕಾಯುವ ಮಹಾನುಭಾವರ ಸದಾ 2


ಧರಿವರ ಶಾಮಸುಂದರ ಚರಿತಾಮೃತ

ಸರಸ ಸುಗ್ರಂಥವ ವಿರಚಿಸಿದೋಡೆಯರ 3

***


No comments:

Post a Comment