..
ಛಲಾವ್ಯಾಕೊ ನಿನಗೆ ಎನ್ನಲಿ ಪ
ಛಲಾವ್ಯಾಕೊ ಕೋಲಾಚಲವೇಂಕಟ
ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ
ಧರಾತಳದಿ ಭೂಧರಾಗ್ರಮಂದಿರ
ಪರಾವರೇಶನೆ ದರಾರಿಕರಶೂರ 1
ರಮಾವರನೆ ತವ ಸಮಾನರಾಗಿಹ
ಸುಮಾನಸಾರ್ಕರ ಕ್ಷಮಾತಳದಿ ಕಾಣೆ 2
ಕುಲಾಲಕೃತ ಮೃತ್ ಕಲಾಪಧರಮಹಾ
ಉಲಾಯುಗಾತ್ಮಜ ಬಲಾರಿಸುತಸುಖ 3
ಶತ್ರುಬವರದೊಳು ವೃತ್ರಾರಿತನಯನ
ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ 4
ತಕ್ಷಕ ಶರಬರೆ ವೀಕ್ಷಿಸಿ ರಥ ಒತ್ತಿ
ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ 5
ಭರ್ಮಾನಸ್ತ್ರದ ನಿಜ ಮರ್ಮವರಿತು ನೀ
ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ 6
ದಶಾಸ್ಯ ಮುಖಮಹನಿಶಾಚರೇಶರ
ದಶಾಕಳದ ಮಹಾ ದಶಾವತಾರನೆ 7
ವಟಾದ ಎಲೆಸಂಪುಟಾದಲೊರಗುಂ -
ಗುಟಾವ ನುಂಬುವ ದಿಟಾ ವಿಶ್ವೋದರ 8
ದಾತಾ ಗುರುಜಗನ್ನಾಥ ವಿಠಲ ನಿಜ
ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ 9
***
No comments:
Post a Comment