ಮಾತಿಗೆ ಬಾರದ ವಸ್ತು ಬಹಳಿದ್ದರೇನು
ಹೋತಿನ ಕೊರಳೊಳಗೆ ಮೊಲೆ ಇದ್ದರೇನು
ತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು
ದಾನವಿಲ್ಲದ ಮನೆಯು ದೊಡ್ಡದಾದರೇನು
ಹೀನ ಗುಣವುಳ್ಳವಗೆ ಹಿರಿಯತನ ಬಂದರೇನು
ಶ್ವಾನನ ಮೊಲೆಯೊಳಗೆ ಹಾಲಿದ್ದರೇನು
ಆದರಿಲ್ಲದ ಊಟ ಅಮೃತಾನ್ನವಿದ್ದೇನು
ವಾದಿಸುವ ಸತಿಸುತರು ಇದ್ದು ಬಲವೇನು
ಕ್ರೋಧವನು ಮಾಡುವ ಸಹೋದರರು ಇದ್ದರೇನು
ಮಾದಿಗರ ಮನೆಯಲ್ಲಿ ಮದುವ್ಯಾದರೇನು
ಹೋಗದೂರಿನ ದಾರಿ ಕೇಳಿ ಮಾಡುವುದೇನು
ಯೋಗಿಯ ಕೂಡ ಪರಿಹಾಸ್ಯವೇನು
ರಾಗದಲಿ ಪುರಂದರ ವಿಠಲನ್ನ ನೆನೆಯದವ
ಯೋಗ್ಯಾದರೇನವನು ಭೋಗ್ಯಾದರೇನು
***
ರಾಗ ಕಾಂಭೋಜಿ. ಝಂಪೆ ತಾಳ (raga tala may differ in audio)
pallavi
mAtige bArada vastu bahaLiddarEnu hOtina koraLoLage mEle iddarEnu
caraNam 1
tAnu uNNada dravya tALyudda iddarEnu dAnavillada maneyu doDDadAdarEnu
hIna guNavuLLavage hiriyatana bandarEnu shvAnana moleyoLage hAliddarEnu
caraNam 2
Adarillada Uta amrtAnnaviddEnu vAdisuva satisutaru iddu balavEnu
krOdhavanu mADuva sahOdhararu iddarEnu mADigara maneyalli maduvyAdarEnu
caraNam 3
hOgadUrina dAri kELi mADuvudEnu yOgiya kUDa parihAsyavEnu
rAgadali purandara viTTalanna neneyadava yOgyAdarEdavanu bhOgyAdarEnu
***ರಾಗ ಮುಖಾರಿ ಝಂಪೆ ತಾಳ
ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ-
ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ-
ತಿನ ಕೊರಳಲ್ಲಿ ಮೊಲೆಯಿದ್ದರೇನು ||ಪ||
ತಾನು ಉಣ್ಣದ ವಸ್ತು ತಾಳದುದ್ದ ಇದ್ದರೇನು
ದಾನವಿಲ್ಲದ ಮನೆಯು ಹಿರಿದಾದರೇನು
ಹೀನ ಗುಣದವನಿಗೆ ಹಿರಿಯತನ ಬಂದರೇನು
ಶ್ವಾನನಾ ಮೊಲೆಯೊಳಗೆ ಹಾಲಿದ್ದರೇನು ||೧||
ವಾದಿಸುವ ಮಗನು ತಾ ವಯ್ಯಾರದಲಿದ್ದರೇನು
ಕಾಡುವ ಸ್ತ್ರೀಯು ಸುಂದರಿಯಾದರೇನು ?
ಕ್ರೋಧವನು ಮಾಡುವವ ಸಹೋದರನಾದರೇನು
ಮಾದಿಗನ ಮನೆಯಲ್ಲಿ ಮದುವ್ಯಾದರೇನು ||೨||
ಹೋಗದೂರಿಗೆ ಹಾದಿಯನು ಕೇಳಿ ಮಾಡುವುದೇನು
ಯೋಗಿಯಾದವನೊಡನೆ ಪರಿಹಾಸ್ಯವೇನು
ಭೋಗಿ ಶ್ರೀ ಪುರಂದರವಿಠ್ಠಲನ್ನ ನೆನೆಯದವ
ಯೋಗಿಯಾದರೂ ಭೋಗಿಯಾದರೂ ಏನಯ್ಯಾ ||೩||
********
ಪುರಂದರದಾಸರು
ಮಾತಿಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮಾಲೆಯಿದ್ದರೇನು ? ಪ.
ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು?ದಾನವಿಲ್ಲದ ಮನೆಯು ದೊಡ್ಡದಾದರೇನು ?ಹೀನ ಕುಲದವಂಗೆ ಹಿರಿತದ ಬಂದರೇನುಶ್ವಾನನ ಮೊಲೆಯೊಳು ಹಾಲಿದ್ದರೇನು 1
ವಾದಿಸುವ ಮಗನು ಒಯ್ಯಾರದಲಿದ್ದರೇನುಕಾದುವಸತಿ ಕೆಲದೊಳಿದ್ದರೇನು ?ಕ್ರೋಧವನು ಅಳಿಯದ ಸೋದರನು ಇದ್ದರೇನುಮಾದಿಗರ ಮನೆಯಲಿ ಮದುವೆ ಆದರೇನು 2
ಹೋಗದೂರಿನ ಹಾದಿಕೇಳಿ ಮಾಡುವುದೇನುಮೂಗನ ಕಾಡ ಏಕಾಂತವಿನ್ನೇನು ?ಯೋಗಿ ಶ್ರೀ ಪುರಂದರವಿಠಲನ ನೆನೆಯದವಯೋಗಿಯಾದರೆ ಏನು ಜೋಗಿಯಾದರೆ ಏನು ? 3
********