Showing posts with label ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ vasudeva vittala. Show all posts
Showing posts with label ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ vasudeva vittala. Show all posts

Monday 6 September 2021

ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ankita vasudeva vittala

ರಾಗ: ಯದುಕುಲಕಾಂಬೋಜಿ ತಾಳ: ತ್ರಿಪುಟ/ತ್ರಿವಿಡ

ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ

ಕರೆದು ಕಾಮಿತಗಳ ಕರೆವೆ ನಾ ನಿಮಗೆಂದು


ದಾರಿಯ ತಪ್ಪಿ ಪೋಗುವ ಧೀರ ಪೋರನ್ನ

ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ

ಊರಿನವೊಳಗೆ ಅವನ ಆಗ

ದೂರ ನೋಡುವರೆ ದೋಷಗಳ ವಿಚಾರಮಾಡುವರೆ

ಧೀರರು ಆವ ಪರಿಯಲವನ ಪಾರುಗಾಣಿಪರಲ್ಲದೆ 1

ಹಸಿದು ಪರರ ಕೇಳದೆ ದ್ವಿಜವರಿಯನ್ನ

ಶಿಶುವಿನ ನೋಡಿ ದಯದಿಂದ ಕರದಿನ್ನು

ಹಸಿದ್ಯಾಕೊ ಎಂದು ಪಾಕವ ಮಾಡಿ

ಹಸನಾಗಿ ತಂದು ಬಡಿಸುವ ಅವಸರದಿ ನಿಂದು ಅವನ ದೋಷ

ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2

ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ-

ಕುಲ ತರುಳನನಳÀ ನೋಡಿ ಕೃಪೆಯಿಂದ ಸುರನದಿ

ಜಲವನೀವೆನೆಂದು ಬೇಗನೆ ದಿವ್ಯ

ಕಲಶವ ತಂದು ಬಾರೆಲೊ

ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ

ತೊಳೆಯ ಕೊಡುವೆನೆಂದು ತಡವ ಮಾಡುವರೆ 3

ಸುಶರೀರತನವನ್ನು ಮನದಲಿ ಬಯಸಿ ತಾ

ಉಸರದ ಮುನಿತನಯನ ಕಂಡು ತಾವಾಗಿ

ಕುಶಲವವು ಕೇಳಿ ದೇವತ ವೈದ್ಯ

ಅಸಮರೆಂದ್ಹೇಳಿ (ರಸ ಮಾಡೆಂಧ್ಹೇಳಿ) ಅವಗೆ ದಿವ್ಯ

ರಸವನು ಪೇಳಿ (ಪಸಿ) ನಿನ್ನಲಿದ್ದಾ

ಕಿಸರು ಪೋದರೆ ಕೊಡುವೆವೆಂದು ನಿಲುವರೆ 4

ಆರ್ತಿಯ ಭಕುತನ್ನ ನೋಡೀಗ ನಿನ ದಿವ್ಯ

ಕೀರ್ತಿಯ ನೋಡಿಕೊ ವಾಸುದೇವವಿಠಲನ

ಮೂರ್ತಿಯ ಭಜಕ ಭಕ್ತರಾಭೀಷ್ಟ

ಪೂರ್ತಿಗೆ ಜನಕ ನಿನ್ನಯ ಗುಣ

ಸ್ಫೂರ್ತಿ ಉಳ್ಳನಕ ಪಾಪದ ಲೇಶ

ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5

****