Monday, 6 September 2021

ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ankita vasudeva vittala

ರಾಗ: ಯದುಕುಲಕಾಂಬೋಜಿ ತಾಳ: ತ್ರಿಪುಟ/ತ್ರಿವಿಡ

ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ

ಕರೆದು ಕಾಮಿತಗಳ ಕರೆವೆ ನಾ ನಿಮಗೆಂದು ಪ


ದಾರಿಯ ತಪ್ಪಿ ಪೋಗುವ ಧೀರ ಪೋರನ್ನ

ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ

ಊರಿನವೊಳಗೆ ಅವನ ಆಗ

ದೂರ ನೋಡುವರೆ ದೋಷಗಳ ವಿಚಾರಮಾಡುವರೆ

ಧೀರರು ಆವ ಪರಿಯಲವನ ಪಾರುಗಾಣಿಪರಲ್ಲದೆ 1

ಹಸಿದು ಪರರ ಕೇಳದೆ ದ್ವಿಜವರಿಯನ್ನ

ಶಿಶುವಿನ ನೋಡಿ ದಯದಿಂದ ಕರದಿನ್ನು

ಹಸಿದ್ಯಾಕೊ ಎಂದು ಪಾಕವ ಮಾಡಿ

ಹಸನಾಗಿ ತಂದು ಬಡಿಸುವ ಅವಸರದಿ ನಿಂದು ಅವನ ದೋಷ

ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2

ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ-

ಕುಲ ತರುಳನನಳÀ ನೋಡಿ ಕೃಪೆಯಿಂದ ಸುರನದಿ

ಜಲವನೀವೆನೆಂದು ಬೇಗನೆ ದಿವ್ಯ

ಕಲಶವ ತಂದು ಬಾರೆಲೊ

ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ

ತೊಳೆಯ ಕೊಡುವೆನೆಂದು ತಡವ ಮಾಡುವರೆ 3

ಸುಶರೀರತನವನ್ನು ಮನದಲಿ ಬಯಸಿ ತಾ

ಉಸರದ ಮುನಿತನಯನ ಕಂಡು ತಾವಾಗಿ

ಕುಶಲವವು ಕೇಳಿ ದೇವತ ವೈದ್ಯ

ಅಸಮರೆಂದ್ಹೇಳಿ (ರಸ ಮಾಡೆಂಧ್ಹೇಳಿ) ಅವಗೆ ದಿವ್ಯ

ರಸವನು ಪೇಳಿ (ಪಸಿ) ನಿನ್ನಲಿದ್ದಾ

ಕಿಸರು ಪೋದರೆ ಕೊಡುವೆವೆಂದು ನಿಲುವರೆ 4

ಆರ್ತಿಯ ಭಕುತನ್ನ ನೋಡೀಗ ನಿನ ದಿವ್ಯ

ಕೀರ್ತಿಯ ನೋಡಿಕೊ ವಾಸುದೇವವಿಠಲನ

ಮೂರ್ತಿಯ ಭಜಕ ಭಕ್ತರಾಭೀಷ್ಟ

ಪೂರ್ತಿಗೆ ಜನಕ ನಿನ್ನಯ ಗುಣ

ಸ್ಫೂರ್ತಿ ಉಳ್ಳನಕ ಪಾಪದ ಲೇಶ

ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5

****


No comments:

Post a Comment