ರಾಗ: [ರಾಗಮಾಲಿಕೆ] ತಾಳ: [ಆದಿ]
ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು ಪ
ಭ್ರಾಂತಿಯನೀಗಿಸಿ ಶಾಂತಿಯನೀಡುತ
ಚಿಂತೆಯ ಹರಿಸುತ ಕಂತುಪಿತನದಾಸ
ಸಂತರಭೀಷ್ಟರ ನಿರಂತರ ಸಲಿಸುವ
ಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ 1
ಅರ್ತಿಯಿಂದಲಿ ತನ್ನ ಪ್ರಾರ್ಥನೆಗೈಯ್ಯುವ
ಆರ್ತರಾದವರ ಇಷ್ಟಾರ್ಥವ ಸಲಿಸುತ
ಆರ್ತರಕ್ಷಕÀ ನಮ್ಮ ಗುರು ರಾಘವೇಂದ್ರರ
ಕೀರ್ತಿಯ ಪಾಡುತ ಪ್ರಾರ್ಥನೆಗೈವುದು 2
ಕರುಣಾಮೃತದ ಧಾರೆಯ ಹರಿಸುತ
ಶರಣರ ಪೊರೆಯುವ ಪರಮ ದಯಾಕರ
ಕರುಣಾಭರಣ ಶ್ರೀಕೃಷ್ಣವಿಠಲನ
ಚರಣಸೇವೆಯಮಾಳ್ಪ ರಾಘವೇಂದ್ರರ ಭಜನೆ 3
***
No comments:
Post a Comment