Showing posts with label ಸಿರಿಯ ಮದವೆ ಮುಕುಂದ ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ neleyadikeshava. Show all posts
Showing posts with label ಸಿರಿಯ ಮದವೆ ಮುಕುಂದ ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ neleyadikeshava. Show all posts

Wednesday, 1 September 2021

ಸಿರಿಯ ಮದವೆ ಮುಕುಂದ ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ankita neleyadikeshava

 ..

ಸಿರಿಯ ಮದವೆ ಮುಕುಂದ - ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಪ


ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ 1


ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ 2


ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? 3


ಶೇಷ ಹಾಸು ಮಂಚವು, ಗರುಡ ತುರುಗವು, ಪೀತವಾಸದುಡುಗೆಯು, ಕೊರಳಲಿ ವೈಜಯಂತಿಮೀಸಲಳಿಯದ ಪುಷ್ಪಮಾಲೆಗಳ ಧರಿಸಿ ಜಗದೀಶನೆಂಬುವ ಬಿರುದು ಹೊಗಳಿಸಿಕೊಳ್ಳುವ 4


ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆಶಕ್ತ ಎನ್ನನು ಕಾಯೋ ಸುಲಭದಿಂದಮುಕ್ತಿಯನ್ನು ಪ್ರಕಟಿಸಲು ಲೋಕದೊಳು ಭಜಕರ್ಗೆಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ5

***