ನೀನಹುದೊ ಘನಮಹಿಮ ಮುನಿಜನರೊಡೆಯ ಪೂರ್ಣ
ದೀನದಯಾಳು ನೀನೆ ಹರಿಯೆ ||೧||
ಪತಿತಪಾವನನೆಂದು ಶ್ರುತಿ ಸಾರುವುದು ಕೇಳಿ
ಅತಿ ಹರುಷದಿಂದಲಿ ಬಂದೆನೊ ಹರಿಯೆ ||೨||
ಮತಿಹೀನನವಗುಣವ ಕ್ಷಿತಿಯೊಳು ನೀ ನೋಡದೆ
ಪಥವಗೊಳಿಸುವುದು ಎನಗೆ ಹರಿಯೆ ||೩||
ಮೊರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ
ಕರುಣದ ಅಭಯ ತೋರೊ ಎನಗೆ ಹರಿಯೆ ||೪||
ಅರಿಯೆ ನಾ ನಿಮ್ಮ ಏನಾ ಬ್ಯಾರೆ ಇನ್ನೊಂದು ಪಥ
ಶಿರವ ನಮಿಸಿಹೆನೊ ನಿಮಗೆ ಹರಿಯೆ ||೫||
ಶರಣಾಗತರ ಹೊರೆವ ಬಿರುದು ನಿಮ್ಮದು ಪೂರ್ಣ
ಸಾರುವುದ ತಿಳಕೊಳಲೊಲ್ಲೆ ಹರಿಯೆ ||೬||
ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು
ನೋಡಿ ದಯಮಾಡೊ ಎನಗೆ ಹರಿಯೆ ||೭||
ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ
ಸಿರಿ ಸಕಲಪದವು ನೀನೆ ಹರಿಯೆ ||೮||
ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ
ಧನ್ಯಗೈಸೊ ನೀ ಪ್ರಾಣವ ಹರಿಯೆ ||೯||
***
ಪಟದೀಪ ರಾಗ , ಝಂಪೆತಾಳ (raga tala may differ in audio)
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1
ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2
ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3
ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4
ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5
ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6
ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7
ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8
ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
****