..
ಪಾದವ ತೊಳೆದು ಪಾವನರಾಗಿಹರುಷದಿ ತಲೆದೂಗಿಪಾದವ ತೊಳೆದು ಪಾವನರಾಗಿಭಾವೆ ವಿನೋದದಿ ಕೃಷ್ಣನಗುತಲಿ ಪ.
ಗುಜ್ಜೆಯರ ಕಾಲಿಗೆ ತಕ್ಕ ವಜ್ರಕಲ್ಲನೆಪಿಡಿದುಅರ್ಜುನನÀ ಮಡದಿ ಸುಭದ್ರಾಅರ್ಜುನನÀ ಮಡದಿ ಸುಭದ್ರಾ ಹರುಷದಿಕಂಜನೇತ್ರಿಯರ ಉಪಚರಿಸಿ 1
ಸತ್ಯಭಾಮೆಯ ಪಾದ ಭಕ್ತಿಯಿಂದ ಹಿಡಿದಳು ಪಾರ್ಥನ ಮಡದಿ ಸುಭದ್ರೆಪಾರ್ಥನ ಮಡದಿ ಸುಭದ್ರಾ ಹರುಷದಿಅತ್ತಿಗೆಯ ಕಾಲ ತೊಳೆದಳು2
ಮಂದಗಮನೆಯರಿಗೆಲ್ಲ ಗಂಧ ಕಸ್ತೂರಿಯಿಟ್ಟುಅಂದವಾಗಿದ್ದ ಅರಿಷಿಣಅಂದವಾಗಿದ್ದ ಅರಿಷಿಣ ಕುಂಕುಮದಿಂದ ಇಂದುವದನೆಯರ ಉಪಚರಿಸಿ3
ಶ್ರೀದೇವಿಯರಿಗೆ ದಿವ್ಯ ಕ್ಯಾದಿಗೆ ಮಲ್ಲಿಗೆ ಮುಡಿಸಿ ಸುಗಂಧಿ ಕೇಶರ ವೀಳ್ಯವ ಸುಗಂಧಿಕೇಶರ ವೀಳ್ಯ ಅಡಿಕೆ ಕೊಟ್ಟುಮಾಧವನ ಮಡದಿಯರ ಉಪಚರಿಸಿ4
ನಳಿನಾಕ್ಷಿಯರಿಗೆ ಹೆಳಲು ಬಂಗಾರವ್ಹಾಕಿಹೊಳೆವೊ ಮಾಣಿಕದ ಸರಗಳುಹೊಳೆವೊ ಮಾಣಿಕದ ಸರವುಸರಗಿಯನಿಟ್ಟುಚಲುವ ರಾಮೇಶನ ಅರಸಿಯ ಪಾದ ತೊಳೆದು ಪಾವನರಾಗಿ5
****