Showing posts with label ಎಂತು ನೋಡುವಿಯನ್ನ ಅಂತ ಹರಿಯೇ ಕಂತುಪಿತ gurumahipati. Show all posts
Showing posts with label ಎಂತು ನೋಡುವಿಯನ್ನ ಅಂತ ಹರಿಯೇ ಕಂತುಪಿತ gurumahipati. Show all posts

Wednesday, 1 September 2021

ಎಂತು ನೋಡುವಿಯನ್ನ ಅಂತ ಹರಿಯೇ ಕಂತುಪಿತ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಂತು ನೋಡುವಿಯನ್ನ ಅಂತ ಹರಿಯೇ| ಕಂತುಪಿತ ಕೈವಿಡಿದು ಕಡೆಗಾಣಿಸಯ್ಯಾ ಪ 

ಆಶೆಯೆಂಬಾ ಮಹಾ ಹೆಸರುಳ್ಳ ಆ ನದಿಯು| ಲೇಶ ಅಂತಿ-ಲ್ಲದಾ ಚಿಂತೆ ಥಡಿಯು| ಸೂಸುತಿವೆ ಇದರೊಳಗ ಮನೋರಥವೆಂಬ ಜಲ| ಘಾಸಿ ಮಾಡುವ ಬಯಕೆ ಲಹರಿ ಬರುತಿದೆ 1 
ದೋರುತಿದೆ ಸಂಸಾರ ತಾಪದಾವಾನಳವು | ಹರಿದು ಬರುತಿದೆ ಕಾಳಸರ್ಪ ತಾನು | ಅರಿಷಡ್ವರ್ಗಗಳನು ಉತ್ತುಂಗ ಜಲ ಚರವು | ತೆರಗಾಣೆ ಮೋಹಸುಳಿಯಲಿ ಬಿದ್ದ ಬಳಿಕಾ 2 
ನಿನ್ನ ನಾಮವೆಂಬ ಸಂಗಡಿಯನು ಕಟ್ಟಿ| ಮುನ್ನಿನ ಪರಾಧಗಳ ಕ್ಷಮೆಯ ಮಾಡಿ| ಸನ್ನುತನೆ ಮಹಿಪತಿ ಸುತ ಪ್ರಾಣದೊಡಿಯನೆ| ನಿನ್ನ ದಾಸರ ದಾಸನೆಂದು ದಯಮಾಡಿ3
***