Showing posts with label ಸಂತರ ನೋಡಿರೈ ಅನಂತನ ಪಾಡಿರೈ gurumahipati. Show all posts
Showing posts with label ಸಂತರ ನೋಡಿರೈ ಅನಂತನ ಪಾಡಿರೈ gurumahipati. Show all posts

Wednesday, 1 September 2021

ಸಂತರ ನೋಡಿರೈ ಅನಂತನ ಪಾಡಿರೈ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಸಂತರ ನೋಡಿರೈ ಅನಂತನ ಪಾಡಿರೈ | ತಂತುವಿಡಿದು ನಿಶ್ಚಂತದಿ ಮುಕ್ತಿಯ | ಪಡೆದವರಾ ನಿಂದವರಾ ಪ 


ದ್ವಿತಿಯೋ ಭಾಗೀರಥಿಯೋ | ಹರಿಪ್ರಸಾದವಕೊಂಬುವ ಸಂತರ | ಉದರೋ ಶ್ರೀ ಕೇದಾರೋ | ಹೃದಯೋ ವೇದದ್ಭುಧವೋ | ಕಂಠೋ ಭೂವೈಕುಂಠೋ ಮ 1 

ಕರವೋ ಕಾಶಿಪುರವೋ | ವರವೋ ರಾಮೇಶ್ವರವೋ | ಕಿವಿಯೋ ಶಾಸ್ತ್ರದ ಗವಿಯೋ | ಅಮೃತ ಸದನೋ 2 

ಹರಿಪದಧ್ಯಾಯಿಸಿ ನೋಡುವ ಸಂತರ | ನಯನೋ ಸ್ವಸುಖದಯನೋ | ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ | ಧರೆಯೊಳು ಮತ್ತೊಂದನ್ಯಕ ಯರಗದ | ಹಣಿಯೋ ಮುತ್ತಿನ ಮಣಿಯೋ | ಶಿರವೋ ಕಂಚಿಪುರವೋ 3 

ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ | ಧರೆಯೊಳು ಮಾಡುವ ಸಂತರ ವ್ಯವಹಾ | ರಗಳೋ ಹರಿಶೇವೆಗಳೋ | ನುಡಿಯೋಭವದಿಕ್ಕೆಡಿಯೋ | ಹರಿಪ್ರೇಮದಿ ತುಳಕ್ಯಾಡುವ ಜಲಬಿಂ | ದುಗಳೋ ಭಕ್ತಿಯ ಮುಗಳೋ 4 

ನುಡಿಯೋ ಸದ್ಗತಿಯಡಿಯೋ | ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ ನಂದನವನವೋ | ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ | ಕ್ರಮವರುಹಿದ ಗುರುಮಹಿಪತಿ ನಂದನ | ಪ್ರಿಯನೋ ಕರುಣಾಲಯನೋ 5

***