Showing posts with label ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ hayavadana SHREESHA NEENAHUDO SHESHAACHALAVAASA NEENAHUDO. Show all posts
Showing posts with label ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ hayavadana SHREESHA NEENAHUDO SHESHAACHALAVAASA NEENAHUDO. Show all posts

Saturday, 11 December 2021

ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ ankita hayavadana SHREESHA NEENAHUDO SHESHAACHALAVAASA NEENAHUDO



ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ ಪ.


ಶೇಷಶಯನ ಸುರೇಶವಂದಿತಶೇಷಜನರನು ಪಾಲಿಸಿ ಬಡ್ಡಿಕಾಸು ಸೇರಿಸಿ ಗಂಟುಕಟ್ಟುವಕ್ಯಾಸಕ್ಕಿ ತಿಮ್ಮಪ್ಪ ನೀನೆ ಅ.ಪ.


ತÀಂದೆ ನೀನಹುದೊ ಕರುಣಾಸಿಂಧು ನೀನಹುದೊಅಂದುದ್ರುಪದನ ನಂದನೆಯ ಎಳೆತಂದು ಘಾಸಿಯ ಮಾಡುತಿರÀಲುಮುಂದೆ ಬಂದು ಅಕ್ಷಯವೆಂದು ಸಲಹಿದಮಂದಹಾಸ ಮುಕುಂದನು ನೀನೆ 1


ಧೀರ ನೀನಹುದೊ ಜಗದೋದ್ಧಾರ ನೀನಹುದೊಬಾರಿ ಬಾರಿಗೆ ನಿನ್ನಪಾದ ಸುವಾರಿಜಂಗಳಸೇರಿದ ಭಕ್ತರ ಘೋರ ದುರಿತವದೂರಗೈಸುವ ಮಾರಜನಕ ಅ-ಪಾರ ಮಹಿಮನೆ 2


ಧನ್ಯ ನೀನಹುದೊ ಸುರಮುನಿಮಾನ್ಯ ನೀನಹುದೊಪನ್ನಗಾರಿವಾಹನ್ನ ಧರೆಯೊಳುಇನ್ನು ನಿನಗೆದುರ್ಯಾರ ಕಾಣೆನೊ ಪ್ರ-ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಪನ್ನವತ್ಸಲ ಶ್ರೀ ಹಯವದನ 3

***

ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ || PA ||


ಶೇಷಶಯನ ಸುರೇಶವಂದಿತ ಶೇಷಜನರನು ಪಾಲಿಸಿ

ಬಡ್ಡಿಕಾಸು ಸೇರಿಸಿ ಗಂಟು ಕಟ್ಟುವ ಕ್ಯಾಸಕ್ಕಿ ತಿಮ್ಮಪ್ಪ ನೀನೆ || A PA ||


ತಂದೆ ನೀನಹುದೊ ಕರುಣಾಸಿಂಧು ನೀನಹುದೊ

ಅಂದು ದ್ರುಪದನ ನಂದನೆಯ ಎಳೆ ತಂದು ಘಾಸಿಯ ಮಾಡುತಿರಲು

ಮುಂದೆ ಬಂದು ಅಕ್ಷಯವೆಂದು ಸಲಹಿದ ಮಂದಹಾಸ ಮುಕುಂದನು ನೀನೆ || 1 ||


ಧೀರ ನೀನಹುದೊ ಜಗದೋದ್ಧಾರ ನೀನಹುದೊ

ಬಾರಿ ಬಾರಿಗೆ ನಿನ್ನಪಾದ ಸುವಾರಿಜಂಗಳ ಸೇರಿದ ಭಕ್ತರ

ಘೋರ ದುರಿತವ ದೂರಗೈಸುವ ಮಾರಜನಕ ಅಪಾರ ಮಹಿಮನೆ || 2 ||


ಧನ್ಯ ನೀನಹುದೊ ಸುರಮುನಿ ಮಾನ್ಯ ನೀನಹುದೊ

ಪನ್ನಗಾರಿವಾಹನ್ನ ಧರೆಯೊಳು ಇನ್ನು ನಿನಗೆದುರ್ಯಾರ ಕಾಣೆನೊ


ಪ್ರಸನ್ನನಾಗೆಲೊ ಬಿನ್ನಹ ಕೇಳು ಪ್ರಪನ್ನವತ್ಸಲ ಶ್ರೀ ಹಯವದನ || 3 ||

***


Śrīśa nīnahudō śēṣācalavāsa nīnahudo || PA ||


śēṣaśayana surēśavandita śēṣajanaranu pālisi baḍḍikāsu sērisi gaṇṭu kaṭṭuva kyāsakki tim’mappa nīne || A PA || tande nīnahudo karuṇāsindhu nīnahudo andu drupadana nandaneya eḷe tandu ghāsiya māḍutiralu munde bandu akṣayavendu salahida mandahāsa mukundanu nīne || 1 ||


dhīra nīnahudo jagadōd’dhāra nīnahudo bāri bārige ninnapāda suvārijaṅgaḷa sērida bhaktara ghōra duritava dūragaisuva mārajanaka apāra mahimane || 2 ||


dhan’ya nīnahudo suramuni mān’ya nīnahudo pannagārivāhanna dhareyoḷu innu ninageduryāra kāṇeno prasannanāgelo binnaha kēḷu prapannavatsala śrī hayavadana || 3 ||

***