Showing posts with label ನೀಚನಲ್ಲವೇ ಇವನು ನೀಚನಲ್ಲವೇ jagannatha vittala. Show all posts
Showing posts with label ನೀಚನಲ್ಲವೇ ಇವನು ನೀಚನಲ್ಲವೇ jagannatha vittala. Show all posts

Saturday, 14 December 2019

ನೀಚನಲ್ಲವೇ ಇವನು ನೀಚನಲ್ಲವೇ ankita jagannatha vittala

by ಜಗನ್ನಾಥದಾಸರು
ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್)

ನೀಚನಲ್ಲವೆ ಇವನು ನೀಚನಲ್ಲವೆ ||ಪ||

ಕೀಚಕಾರಿಪ್ರಿಯನ ಗುಣವ
ಯೋಚಿಸದಲಿಪ್ಪ ನರನು ||ಅ.ಪ||

ಜನನಿ ಜನಕರಂತೆ ಜನಾ-
ರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆ ಮನೆಗಳರಸಿ
ಶುನಕನಂತೆ ತಿರುಗುತಿಹನು ||೧||

ಜೀವ ತಾನಕರ್ತೃವೆಂದು
ದೇವನೊಬ್ಬ ಕರ್ತೃ ರಮಾ-
ದೇವಿ ಮೊದಲುಗೊಂಡು ಹರಿಯ
ಸೇವಕರೆಂದರಿಯದವನು ||೨||

ಲೋಕವಾರ್ತೆಗಳಲಿ ಏಡ
ಮೂಕನಂತೆ ವಿಷಯಗಳವ-
ಲೋಕಿಸದಲೆ ಶ್ರೀಶಗಿವು ಪ್ರ-
ತೀಕವೆಂದು ತಿಳಿಯದವನು ||೩||

ಬಹಳ ದ್ರವ್ಯದಿಂದ ಗರುಡ
ವಾಹನನಂಘ್ರಿ ಭಜಿಸಿ ಅನು-
ಗ್ರಹವ ಮಾಡುಯೆಂದು ಬರಿದೆ
ಐಹಿಕಸುಖವ ಬಯಸುವವನು ||೪||

ಶ್ರೀಕಳತ್ರನಂಘ್ರಿ ಕಮಲ-
ವೇಕಚಿತ್ತದಲ್ಲಿ ಮನೋ-
ವ್ಯಾಕುಲಗಳ ಬಿಟ್ಟು
ಸುಖೋದ್ರೇಕದಿಂದ ಭಜಿಸುವವನು ||೫||

ಹರಿಕಥಾಮೃತವ ಬಿಟ್ಟು
ನರಚರಿತ್ರೆಯಿಂದ ದ-
ರ್ದುರಗಳಂತೆ ಹಾಳುಗೋಷ್ಠಿ
ಹರಟೆ ದಿವಸ ಕಳೆಯುತಿಹನು ||೬||

ವಿಹಿತ ಧರ್ಮ ತೊರೆದು ಪರರ
ಗೃಹಗಳಲಿ ಸಂಚರಿಸುತ
ಕುಹಕಯುಕ್ತಿಯಿಂದ ಲೋಕ
ಮಹಿತರನ್ನು ನಿಂದಿಸುವನು ||೭||

ಕರಣಜನ್ಯ ಪುಣ್ಯಪಾಪ-
ವೆರಡು ಹರಿಯಧೀನವೆಂದು
ಸ್ಮರಿಸುತ ಅತಿ ಭಕುತಿಯಿಂದ
ಹರುಷ ಪಡದಲಿಪ್ಪ ನರನು ||೮||

ವಾತಜನಕನೆನಿಪ ಜಗ-
ನ್ನಾಥವಿಠಲ ಪಾದಪದ್ಮ
ಪೋತವಾಶ್ರಯಿಸಿ ಭವ ಕು-
ವೈತರಣಿಯ ದಾಟದವನು ||೯||
***


pallavi

nIcanallavE ivanu nIcanallavE

anupallavi

kIcakAri priyana guNava yOcisadalippa naranu

caraNam 1

janani janakarante janArdananu salahutiralu biTTu
dhanikara mane manegaLarasi shunakanante tirugutihanu

caraNam 2

jIva tAna kartravendu dEvanobba kartra ramAdEvi
modalugoNDu hariya sEvakendariyadavanu

caraNam 3

lOka vArtegaLalli eDamUkanante viSayagaLava
lOkisadale shrI shagivu pratIkavendu tiLiyadavanu

caraNam 4

bahaLa dravyadinda garuDa vAhanananghri bhajisi
anugrahava mADu endu baride aihika sukhava bayasuvavanu

caraNam 5

shrIkaLatrananghri kamala vEkacittadalli
manOvyAkulagaLa biTTu sukhOdrEkadinda bhajisuvavanu

caraNam 6

harikathAmrtava biTTu nara caritreyinda darduragaLante
hALu gOSTi haraTe divasa kaLeyutihanu

caraNam 7

vihita dharma toredu parara grahagaLalli sancarisuta
kuhakayuktiyinda lOka mahitarannu nindisuvanu

caraNam 8

karaNa janya puNya pApaveraDu hariyadhInavendu
smarisuta ati bhakutiyinda haruSa paDadalippa naranu

caraNam 9

vAta janakanenipa jagannAtha viThalana pAda padma
pOtavAshrayisi bhavakuvaitaraNiya dATadavanu
***

ನೀಚನಲ್ಲವೇ ಇವನು ನೀಚನಲ್ಲವೇ ಪ

ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ.

ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ
ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1

ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ
ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2

ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3

ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ
ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4

ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ
ನಿಂದಿಸುವ ಮನುಜ5

ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು
ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6

ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು
ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7

ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ
ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8

ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ
ಭವ ವೈತರಣಿಯ ದಾಟದವನು 9
********