ಸೋಹನಿ ರಾಗ ತೀನ್ ತಾಳ
ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ||ಧ್ರುವ||
ಹಾದಿ ಅದೆ ಹಿಂದೆ ಗಾದ ಅದೆ ಮುಂದೆ
ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದೆ ||೧||
ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ
ಲುಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದೆ ||೨||
ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ
ಅರ್ತು ಇದೇ ಕೇಳಿಕೊಳ್ಳಿ ಗುರುಪಾದಕೊಂದೆ ||೩||
ಗುಂಭ ಅದೆ ಹಿಂದೆ ಡಂಭ ಅದೆ ಮುಂದೆ
ಇಂಬು ಇದೆ ತಿಳಿದುಕೊಳ್ಳಿ ಗುರುಜ್ಞಾನದಿಂದೆ ||೪||
ನೋಟ ಅದೆ ಮುಂದೆ ಕೂಟ ಅದೆ ಹಿಂದೆ
ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ ||೫||
ದೇಹ ಅದೆ ಮುಂದೆ ನೋವು ಅದೆ ಹಿಂದೆ
ಸೋಹ್ಯ (ಸೋಹಂ ) ದೋರಿಕೊಡುವ ಮಹಿಪತಿಗುರು ತಂದೆ ||೬|
********