Showing posts with label ಸಿದ್ಧಾಂತವಿದು ನೋಡಿ ಸದ್ಗುರುವಿನ mahipati. Show all posts
Showing posts with label ಸಿದ್ಧಾಂತವಿದು ನೋಡಿ ಸದ್ಗುರುವಿನ mahipati. Show all posts

Thursday, 12 December 2019

ಸಿದ್ಧಾಂತವಿದು ನೋಡಿ ಸದ್ಗುರುವಿನ ankita mahipati

ತೋಡಿ ರಾಗ ತೀನ್ ತಾಳ

ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
ಬುದ್ಧಿವಂತರು ಬಲ್ಲರಾಧ್ಯಾತ್ಮಸುಖವು ||ಧ್ರುವ||

ಕಾಲಿಲ್ಲದಾಕಳವು ಬಾಲಮುಖದಲಿ ಬಂದು
ಕಾಳರೂಪದ ಹುಲಿಯನೆ ನುಂಗಿತು
ಮೇಲುವರಿಯಲಿ ಬಂದು ಜಲದೊಳಗಿನ ಕಪ್ಪೆ
ಮೂಲಸರ್ಪದ ಹೆಡೆಯ ನುಂಗಿದುದು ನೋಡಿ ||೧||

ಬಾಲ ಇಲ್ಲದ ಇಲಿಯು ಜಾಲ ಹಾಕುತ ಬಂದು
ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು
ನಾಲಿಗಿಲ್ಲದ ಮೊಲವು ನಿಲುಕಿ ಜಪ್ಪವ ಹಾಕಿ
ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ ||೨||

ದಿವ್ಯಯೋಗದ ಮಾತು ಕಿವಿ ಇಲ್ಲದವ ಕೇಳಿ
ಕಣ್ಣಿಲ್ಲದವ ಕಂಡು ಬೆರಗಾದನು
ಕೌತುಕವ ಕಂಡು ಮಹಿಪತಿಯು ತನ್ನೊಳು
ತಾನು ತ್ರಾಹಿ ತ್ರಾಹಿಯೆಂದ ಮನದೊಳು ||೩||
****

ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮ ಸುಖವು ಪ  


ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲ ಸರ್ಪದ ಹೆಡೆಯ ನುಂಗಿದದು ನೋಡಿ 1 

ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ2 

ದಿವ್ಯ ಯೋಗದ ಮಾತು ಕಿವಿ ಇಲ್ಲದವಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವು ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯಿಂದ ಮನದೊಳು 3

****